ಸಿಎಂ ಧರ್ಮ ನೋಡಿ ಮನೆಗೆ ಭೇಟಿ ಕೊಡ್ತಾರಾ.? ಸರ್ಕಾರದ ವಿರುದ್ಧ ಮಸೂದ್ ತಾಯಿ ಆಕ್ರೋಶ

ಪ್ರವೀಣ್ ನೆಟ್ಟಾರು ಹತ್ಯೆಗೂ 1 ವಾರ ಮುನ್ನ ಮಸೂದ್ ಕೊಲೆಯಾಗುತ್ತದೆ. 'ನನ್ನ ಮಗ ಮನೆಯ ಆಧಾರ ಸ್ತಂಭವಾಗಿದ್ದ. ದುಡಿಯುವ ಮಗನನ್ನು ಕಳೆದುಕೊಂಡಿದ್ದೇವೆ. ಸಿಎಂ ಪ್ರವೀನ್ ಮನೆಗೆ ಭೇಟಿ ನೀಡಿದ್ದಾರೆ. ಇದುವರೆಗೂ ನಮ್ಮ ಮನೆಗೆ ಬಂದಿಲ್ಲ. ನಮ್ಮ ನೋವು ಅವರಂತೆಯೇ ಅಲ್ವಾ..? ಎಂದು ಮಸೂದ್ ತಾಯಿ ಸಾರಮ್ಮ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

First Published Jul 30, 2022, 10:30 AM IST | Last Updated Jul 30, 2022, 10:37 AM IST

ಪ್ರವೀಣ್ ನೆಟ್ಟಾರು ಹತ್ಯೆಗೂ 1 ವಾರ ಮುನ್ನ ಮಸೂದ್ ಕೊಲೆಯಾಗುತ್ತದೆ. 'ನನ್ನ ಮಗ ಮನೆಯ ಆಧಾರ ಸ್ತಂಭವಾಗಿದ್ದ. ದುಡಿಯುವ ಮಗನನ್ನು ಕಳೆದುಕೊಂಡಿದ್ದೇವೆ. ಸಿಎಂ ಪ್ರವೀನ್ ಮನೆಗೆ ಭೇಟಿ ನೀಡಿದ್ದಾರೆ. ಇದುವರೆಗೂ ನಮ್ಮ ಮನೆಗೆ ಬಂದಿಲ್ಲ. ನಮ್ಮ ನೋವು ಅವರಂತೆಯೇ ಅಲ್ವಾ..? ಪ್ರವೀಣ್ ಮನೆಯವರಂತೆಯೇ ನಮಗೂ ಅನ್ಯಾಯವಾಗಿದೆ. ಧರ್ಮ ನೋಡಿ ಸಿಎಂ ಮನೆಗೆ ಹೋಗ್ತಾರಾ.? ಎಂದು ಮಸೂದ್ ತಾಯಿ ಸಾರಮ್ಮ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಮಂಗಳೂರಿನಲ್ಲಿ ನಿಷೇಧಾಜ್ಞೆ: ಯಾವ್ಯಾವ ಸೇವೆಗಳಿಗೆ ಅವಕಾಶ? ಯವುದಕ್ಕೆ ನಿರ್ಬಂಧ?

'ಹತ್ಯೆಗಳು ನಡೆದ ಬಳಿಕ ಸಿಎಂ ಪಕ್ಷಪಾತ ಧೋರಣೆ ತಾಳಿದ್ದಾರೆ. ಪ್ರವೀಣ್‌ ಮನೆಗೆ ಹೋಗಿ ಪರಿಹಾರ ನೀಡಿದ್ದಾರೆ, ಅಲ್ಲೇ ಸಮೀಪದಲ್ಲಿದ್ದ ಮಸೂದ್‌ ಮನೆಗೆ ತೆರಳಿಲ್ಲ. ಬಿಜೆಪಿಗೆ ಮಾತ್ರ ಸಿಎಂ ಆಗಿರುವಂತೆ ವರ್ತಿಸಿದ್ದಾರೆ. ಮುಖ್ಯಮಂತ್ರಿಯಾಗಿ ಅವರು ಅಯೋಗ್ಯ, ನಾಲಾಯಕ್‌, ಕೂಡಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಎಸ್‌ಡಿಪಿಐ ಕೂಡಾ ಆಗ್ರಹಿಸಿದೆ. 

Video Top Stories