ಪ್ರವೀಣ್ ನೆಟ್ಟಾರು ಹತ್ಯೆ: ಸುಳ್ಯ ಪಿಎಫ್‌ಐ ಕಚೇರಿಯಲ್ಲೇ ಕೊಲೆಗೆ ಸಂಚು?

ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಹತ್ಯೆಗೆ ಸಹಕರಿಸಿದ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ ಆರಕ್ಕೇರಿದೆ.

First Published Aug 8, 2022, 1:24 PM IST | Last Updated Aug 8, 2022, 1:24 PM IST

ಸುಳ್ಯ (ಆ. 08):  ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಹತ್ಯೆಗೆ ಸಹಕರಿಸಿದ ಮತ್ತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಬಂಧಿತರ ಸಂಖ್ಯೆ ಆರಕ್ಕೇರಿದೆ.

ಸುಳ್ಯದ ನಾವೂರು ಬಳಿಯ ನಿವಾಸಿ ಆಬಿದ್‌ (22) ಹಾಗೂ ಬೆಳ್ಳಾರೆ ಗೌರಿ ಹೊಳೆ ನಿವಾಸಿ ನೌಫಲ್‌ (28) ಬಂಧಿತ ಆರೋಪಿಗಳು. ಈ ಇಬ್ಬರು ಆರೋಪಿಗಳನ್ನು ಸುಳ್ಯದ ಪಿಎಫ್‌ಐ ಕಚೇರಿಗೆ ಕರೆ ತಂದು ಸ್ಥಳ ಮಹಜರು ಮಾಡಲಾಗಿದೆ. ಈ ಕಚೇರಿಯಲ್ಲೇ ಪ್ರವೀಣ್ ಹತ್ಯೆಗೆ ಸ್ಕೆಚ್ ಹಾಕಲಾಗಿದೆ ಎನ್ನಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ಎಲ್ಲ ದಾಳಿಕೋರರನ್ನು ಗುರುತಿಸಲಾಗಿದ್ದು, ಅವರಿಗಾಗಿ ಶೋಧ ನಡೆಯುತ್ತಿದೆ.