Asianet Suvarna News Asianet Suvarna News

IAS ಅಧಿಕಾರಿಗಳ ಜಟಾಪಟಿ ಇನ್ನೆರಡು ದಿನಗಳಲ್ಲಿ ಸರಿಯಾಗುತ್ತದೆ: ಎಸ್‌ಟಿ ಸೋಮಶೇಖರ್

Jun 4, 2021, 3:08 PM IST

ಮೈಸೂರು (ಜೂ. 04): ಕೊರೋನಾ ನಿಯಂತ್ರಣ ವಿಚಾರದಲ್ಲಿ ಡೀಸಿ ರೋಹಿಣಿ ಸಿಂಧೂರಿ, ಪಾಲಿಕೆ ಅಯುಕ್ತೆ ಶಿಲ್ಪಾ ನಾಗ್ ನಡುವಿನ ಜಟಾಪಟಿ ಬಹಳ ಚರ್ಚೆಯಾಗುತ್ತಿದೆ. ಈ ವಿವಾದದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಪ್ರತಿಕ್ರಿಯಿಸಿದ್ಧಾರೆ.

ರೋಹಿಣಿ ಸಿಂಧೂರಿ VS ಶಿಲ್ಪಾನಾಗ್ : ಆರೋಪಕ್ಕೆ ಸ್ಪಷ್ಟನೆ ಕೊಟ್ಟ ಡೀಸಿ

'ಜಿಲ್ಲೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ನಾವು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇವೆ. ಐಎಎಸ್ ಅಧಿಕಾರಿಗಳ ಕಚ್ಚಾಟದಿಂದ ನಮಗೆಲ್ಲಾ ಬೇಸರವಾಗಿದೆ. ಈ ಬಗ್ಗೆ ಸಿಎಂ, ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದಿದ್ದೇವೆ. ಇನ್ನೆರಡು ದಿನಗಳಲ್ಲಿ ಎಲ್ಲವೂ ಸರಿಯಾಗುತ್ತದೆ' ಎಂದಿದ್ದಾರೆ. 
 

Video Top Stories