Sringeri: ಕೆಲಸ ಆಗ್ಬೇಕಂದ್ರೆ ಹಣಕ್ಕೆ ಡಿಮ್ಯಾಂಡ್, ಹಕ್ಕುಪತ್ರ ಕೇಳಿದ್ರೆ ಬೆದರಿಕೆ ಹಾಕ್ತಾರೆ ತಹಶೀಲ್ದಾರ್

ಶೃಂಗೇರಿ ತಹಶೀಲ್ದಾರ್ ಅಂಬುಜಾ ಮುಖವಾಡ ಬಯಲು ಮಾಡುವ ಮತ್ತೊಂದು ಸಾಕ್ಷ್ಯ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಏನೇ ಕೆಲಸ ಆಗಬೇಕು ಅಂದರೂ ಅಂಬುಜಾ ದುಡ್ಡಿಗೆ ಡಿಮ್ಯಾಂಡ್ ಇಡುತ್ತಿದ್ದರು. 

First Published Feb 4, 2022, 11:27 AM IST | Last Updated Feb 4, 2022, 12:26 PM IST

ಬೆಂಗಳೂರು (ಫೆ. 04): ಶೃಂಗೇರಿ ತಹಶೀಲ್ದಾರ್ ಅಂಬುಜಾ ಮುಖವಾಡ ಬಯಲು ಮಾಡುವ ಮತ್ತೊಂದು ಸಾಕ್ಷ್ಯ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ. ಏನೇ ಕೆಲಸ ಆಗಬೇಕು ಅಂದರೂ ಅಂಬುಜಾ ದುಡ್ಡಿಗೆ ಡಿಮ್ಯಾಂಡ್ ಇಡುತ್ತಿದ್ದರು. ಹಣ ಕೊಟ್ಟು, ತಲೆ ಮೇಲೆ ಕೈಹೊತ್ತು ಕುಳಿತ ಶೃಂಗೇರಿ ಜನ. ಹಕ್ಕುಪತ್ರ ವಿತರಣೆ ಮಾಹಿತಿ ಕೇಳಿದವನಿಗೆ ಏಜೆಂಟ್ ಮೂಲಕ ಬೆದರಿಕೆ ಹಾಕಿದ್ದಾರೆ. 

ಲಂಚ ಪಡೆವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದ ಶೃಂಗೇರಿ ತಹಸೀಲ್ದಾರ್‌ ಅವರ ಜೀಪ್‌ ಚಾಲಕರಾಗಿದ್ದ ವಿಜೇತ್‌ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಭಾನುವಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿರುವ ಶರತ್‌ ಹಾಗೂ ಸಾರ್ವಜನಿಕರಾದ ರಾಘವೇಂದ್ರ ಮತ್ತು ನಾಗೇಂದ್ರ ಬಂಧಿತರು. ತಹಶೀಲ್ದಾರ್‌ ಜೀಪ್‌ ಚಾಲಕ ವಿಜೇತ್‌ (26) ಶನಿವಾರ ಸಂಜೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿಟ್ಟಡೆತ್‌ ನೋಟಲ್ಲಿ ಈ ಮೂಲರ ಹೆಸರನ್ನು ಉಲ್ಲೇಖಿಸಿದ್ದರು.