ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿಗೆ 15 ವರ್ಷದ ಸಂಭ್ರಮ, ಕಳೆಗಟ್ಟಿದ ವಿಶೇಷ ಕಾರ್ಯಕ್ರಮ
ಉತ್ತರ ಕರ್ನಾಟಕದ ಜನರ ದನಿಯಾಗಿ, ಅವರ ಸಂಕಷ್ಟಗಳಿಗೆ ಪರಿಹಾರವಾಗಿ 2007ರ ಜುಲೈ 21ರಂದು ಸುಂದರ ಕನಸಿನೊಂದಿಗೆ ಹುಟ್ಟಿಕೊಂಡ ‘ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿ’ಯ ಹದಿನೈದು ವರ್ಷಗಳ ಸಂಭ್ರಮೋತ್ಸವ ಅರ್ಥಪೂರ್ಣವಾಗಿ ಜರುಗಿತು.
ಹುಬ್ಬಳ್ಳಿ (ಆ. 08): ಉತ್ತರ ಕರ್ನಾಟಕದ ಜನರ ದನಿಯಾಗಿ, ಅವರ ಸಂಕಷ್ಟಗಳಿಗೆ ಪರಿಹಾರವಾಗಿ 2007ರ ಜುಲೈ 21ರಂದು ಸುಂದರ ಕನಸಿನೊಂದಿಗೆ ಹುಟ್ಟಿಕೊಂಡ ‘ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿ’ಯ ಹದಿನೈದು ವರ್ಷಗಳ ಸಂಭ್ರಮೋತ್ಸವ ಅರ್ಥಪೂರ್ಣವಾಗಿ ಜರುಗಿತು.
ಈ ಭಾಗದ ಸಮಸ್ಯೆಗಳನ್ನು ಶಕ್ತಿ ಕೇಂದ್ರಗಳ ನಾಯಕರಿಗೆ ತಿಳಿಸುವ, ಈ ಮೂಲಕ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನ ಕಳೆದ 15 ವರ್ಷಗಳಲ್ಲಾಗಿದ್ದು ಪತ್ರಿಕೆಗೂ ಸಮಾಧಾನದ ಸಂಗತಿ. ಈ ಹಿನ್ನೆಲೆಯಲ್ಲಿ ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ, ವಿಜಯನಗರ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳನ್ನು ಒಳಗೊಂಡ ಹುಬ್ಬಳ್ಳಿ ಆವೃತ್ತಿಯ ಸುದೀರ್ಘ ಒಂದೂವರೆ ದಶಕಗಳ ಪಯಣದ ಹಾದಿಯನ್ನೊಮ್ಮೆ ಮೆಲಕು ಹಾಕುವ ವಿಶೇಷ ಕಾರ್ಯಕ್ರಮವೊಂದನ್ನು ಶನಿವಾರ ಹುಬ್ಬಳ್ಳಿಯಲ್ಲಿ ಕನ್ನಡಪ್ರಭ ಆಯೋಜಿಸಿತ್ತು. ಒಂದು ವಿಶೇಷ ಸಂದರ್ಭ ಏನೆಂದರೆ, ಪತ್ರಿಕೆ 15 ವರ್ಷಗಳ ಹಿಂದೆ ಎಲ್ಲಿ ಆರಂಭೋತ್ಸವ ಹಮ್ಮಿಕೊಂಡಿತ್ತೋ ಅದೇ ನವೀನ್ ಹೋಟೆಲ್‌ನ ವೇದಿಕೆಯಲ್ಲಿ ಶನಿವಾರ ಅದ್ಧೂರಿಯಾಗಿ ನಡೆಯಿತು.