Asianet Suvarna News Asianet Suvarna News

ಧೂಳು ಹಿಡಿದ ಹುಬ್ಬಳಿಯ ಪಜಲ್‌ ಪಾರ್ಕಿಂಗ್, ಸ್ಮಾರ್ಟ್‌ ಸಿಟಿ ಎಂಡಿ ಹೇಳೋದೇನು?

ಬರೋಬ್ಬರಿ 4.59 ಕೋಟಿ ರೂಪಾಯಿ ಖರ್ಚು ಮಾಡಿ ಪಜಲ್ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ ಹುಬ್ಬಳ್ಳಿ (Hubballi) ನಗರದಲ್ಲಿನ ಕೆಟ್ಟ ರಸ್ತೆಗಳು ಹಾಗೂ ಕೆಟ್ಟ ಪಾರ್ಕಿಂಗ್ ಸೌಲಭ್ಯದ ಕಾರಣಕ್ಕಾಗಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು.

ಬೆಂಗಳೂರು (ಏ.28): ಸ್ಮಾರ್ಟ್ ಸಿಟಿ (Smart City) ಹೆಸರಲ್ಲಿ ಕೋಟಿ ಕೋಟಿ ಸುರಿದಿದ್ರೂ, ಏನೂ ಉಪಯೋಗವಾಗ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಮಹತ್ವಾಕಾಂಕ್ಷೆಯ ಪಜಲ್ ಪಾರ್ಕಿಂಗ್ (Puzzle Parking) ವ್ಯವಸ್ಥೆಗೆ ಧೂಳು ಹಿಡಿಯುತ್ತಿದೆ. ಹುಬ್ಬಳ್ಳಿಯಲ್ಲಿ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಎನ್ನುವ ನಿಟ್ಟಿನಲ್ಲಿ ಈಗಾಗಲೇ ಸಿದ್ಧವಾಗಿರುವ ಪಜಲ್ ಪಾರ್ಕಿಂಗ್ ವ್ಯವಸ್ಥೆಗೆ ಇನ್ನೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.

ಬರೋಬ್ಬರಿ 4.59 ಕೋಟಿ ರೂಪಾಯಿ ಖರ್ಚು ಮಾಡಿ ಪಜಲ್ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ ಹುಬ್ಬಳ್ಳಿ (Hubballi) ನಗರದಲ್ಲಿನ ಕೆಟ್ಟ ರಸ್ತೆಗಳು ಹಾಗೂ ಕೆಟ್ಟ ಪಾರ್ಕಿಂಗ್ ಸೌಲಭ್ಯದ ಕಾರಣಕ್ಕಾಗಿ ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಈಗ ಇಡೀ ವ್ಯವಸ್ಥೆ ಸಿದ್ಧವಾಗಿ ಒಂದು ವರ್ಷಗಳು ಕಳೆದಿದ್ದೂ ಜನರು ಅದನ್ನು ಬಳಸಲು ಸಾಧ್ಯವಾಗುತ್ತಿಲ್ಲ.

18 ಹಾಲಿ ಶಾಸಕರಿಗಿಲ್ಲ ಟಿಕೆಟ್: ಇಲ್ಲಿದೆ ಬಿಜೆಪಿ ಹೈಕಮಾಂಡ್‌ ನಿರ್ಧಾರದ ಹಿಂದಿನ ಕಾರಣ

ಕೋವಿಡ್-19 (Covid 19) ಕಾರಣದಿಂದಾಗಿ ಈ ಯೋಜನೆಗೆ ಕಳೆದ ವರ್ಷ ಅಲ್ಪ ಹಿನ್ನಡೆಯಾಗಿತ್ತು. ಆದರೆ, ಕೆಲಸವನ್ನು ಮುಗಿಸುವ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಲಿಮಿಟೆಡ್ (ಎಚ್ ಡಿಎಸ್ ಸಿಎಲ್) ಸಂಸ್ಥೆಗೆ ಕಾಮಗಾರಿ ಮುಗಿಸುವ ಡೆಡ್ ಲೈನ್ ಅನ್ನು ವಿಸ್ತರಣೆ ಮಾಡಲಾಗಿತ್ತು. ಐದು ಸ್ತರದಲ್ಲಿರುವ ಈ ಪಾರ್ಕಿಂಗ್ ವ್ಯವಸ್ಥೆ ಏಕಕಾಲದಲ್ಲಿ 37 ಕಾರ್ ಗಳನ್ನು ಇರಿಸಿಕೊಳ್ಳಲಿದೆ.

Video Top Stories