Asianet Suvarna News Asianet Suvarna News

ಬಲಾಡ್ಯರ ಕೈಯಲ್ಲಿ ಅಧಿಕಾರ ಇದ್ರೆ, ಶೋಷಿತರಿಗೆ ಮಾರಕವೆಂದು ಅಂಬೇಡ್ಕರ್ ಹೇಳಿದ್ರು: ಸಿದ್ದರಾಮಯ್ಯ

ಅಂಬೇಡ್ಕರ್‌ ಸರ್ವರಿಗೂ ಸಮಪಾಲು, ಸಮಬಾಳು ಎಂದಿದ್ದಾರೆ. ಈಗ ನಾನು ಸಿಎಂ ಆಗಿದ್ದೇನೆ ಎಂದು ವಿರೋಧಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಚಿತ್ರದುರ್ಗ: ಜಿಲ್ಲೆಯಲ್ಲಿ ಕಾಂಗ್ರೆಸ್‌ನಿಂದ ಶೋಷಿತರ ಬೃಹತ್‌ ಜಾಗೃತಿ ಸಮಾವೇಶ(Shoshitara Jagruthi Samavesha)  ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ(Siddaramaiah) ಮಾತನಾಡಿ, ಮಂಡಲ್ ಆಯೋಗದ ವರದಿ ಬದಲು ಕಮಂಡಲ್ ಯಾತ್ರೆ ನಡೆಸಿದ್ರು. ಆರ್‌ಎಸ್‌ಎಸ್(RSS) ಮತ್ತು ಬಿಜೆಪಿಯಿಂದ(BJP) ಮೀಸಲಾತಿ ವಿರೋಧ ಮಾಡಲಾಗ್ತಿದೆ. ಮಂಡಲ್ ಕಮಿಷನ್ ವರದಿ ಜಾರಿಗೆ ತರಬೇಕು. ಅವರಿಗೂ ಕೂಡ ಶಿಕ್ಷಣ, ಆರೋಗ್ಯ, ಅಧಿಕಾರ, ಸಂಪತ್ತಿನಲ್ಲಿ ಪಾಲು ಸಿಗಬೇಕು. ಕೆಲವರ ಕೈಯಲ್ಲಿ ಅಧಿಕಾರ ಇರಬಾರದು. ಬಲಾಡ್ಯರ ಕೈಯಲ್ಲಿ ಅಧಿಕಾರ ಇದ್ರೆ ಶೋಷಿತರಿಗೆ ಮಾರಕ ಎಂದು ಅಂಬೇಡ್ಕರ್ ಹೇಳಿದ್ರು. ನನ್ನನ್ನು ಕೆಲವರು ವಿರೋಧ ಮಾಡ್ತಾರೆ. ಕುರಿ ಕಾಯುವವನ ಮಗ ಸಿಎಂ ಆದ ಎಂದು ವಿರೋಧ ಮಾಡ್ತಾರೆ. 14 ಬಜೆಟ್ ಮಂಡಿಸಿದ್ದಕ್ಕೆ ವಿರೋಧ ಮಾಡ್ತಿದ್ದಾರೆ. ಎಲ್ಲಾ ಜಾತಿಯ ಜನರಿಗೆ ಅನ್ನಭಾಗ್ಯವನ್ನ‌ ಕೊಟ್ಟಿದ್ದು ತಪ್ಪಾ? ಐದು ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಜಾರಿಗೆ ಕೊಟ್ಟಿದ್ದು ಸಿದ್ದರಾಮಯ್ಯ ಅಲ್ವಾ ಎಂದು ಸಿಎಂ ಸಿದ್ದರಾಮಯ್ಯ ಸಮಾವೇಶದಲ್ಲಿ ಕೇಳಿದರು.

ಇದನ್ನೂ ವೀಕ್ಷಿಸಿ:  ಇಂಡಿಯಾ ಮೈತ್ರಿಕೂಟ ಛಿದ್ರವಾಗಿದೆ, ಬಿಹಾರದಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುತ್ತೆ: ಬಿಎಸ್‌ವೈ