Asianet Suvarna News Asianet Suvarna News

ಭಕ್ತರಿಗೆ ದೇವರ ದರ್ಶನ ಭಾಗ್ಯ ಶುರು; ರಾಜ್ಯದ ಬೇರೆ ಬೇರೆ ದೇಗುಲಗಳ ರಿಯಾಲಿಟಿ ಚೆಕ್‌ ಇದು!

ಕೊರೊನಾ ಲಾಕ್‌ಡೌನ್‌ನಿಂದ ಕಳೆದ 75 ದಿನಗಳಿಂದ ಭಕ್ತರಿಗೆ ದರ್ಶನ ನೀಡದ ದೇವಾಲಯಗಳು ಜೂ. 08 ರಿಂದ ತೆರೆದಿವೆ. ದೇವರ ದರ್ಶನ ಭಾಗ್ಯ ನಮ್ಮದಾಗಲಿ ಅಂತ ಭಕ್ತರು ಆಗಮಿಸುತ್ತಿದ್ದಾರೆ. ಹಿಂದೂಗಳ ಪವಿತ್ರ ಶ್ರದ್ಧಾ ಕೇಂದ್ರವಾದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಚಾಮುಂಡಿ ಬೆಟ್ಟದಲ್ಲಿ ಮೊದಲ ದಿನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಭಕ್ತ ಸಮೂಹ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರೆ ಉಳಿದಂತೆ ಬಹುತೇಕ ದೇವಸ್ಥಾನಗಳು ಭಕ್ತರಿಲ್ಲದೇ ಭಣಗುಡುತ್ತಿತ್ತು. 

ಬೆಂಗಳೂರು (ಜೂ. 09): ಲಾಕ್‌ಡೌನ್‌ನಿಂದ ಕಳೆದ 75 ದಿನಗಳಿಂದ ಭಕ್ತರಿಗೆ ದರ್ಶನ ನೀಡದ ದೇವಾಲಯಗಳು ಜೂ. 08 ರಿಂದ ತೆರೆದಿವೆ. ದೇವರ ದರ್ಶನ ಭಾಗ್ಯ ನಮ್ಮದಾಗಲಿ ಅಂತ ಭಕ್ತರು ಆಗಮಿಸುತ್ತಿದ್ದಾರೆ. ಹಿಂದೂಗಳ ಪವಿತ್ರ ಶ್ರದ್ಧಾ ಕೇಂದ್ರವಾದ ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಚಾಮುಂಡಿ ಬೆಟ್ಟದಲ್ಲಿ ಮೊದಲ ದಿನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ಭಕ್ತ ಸಮೂಹ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರೆ ಉಳಿದಂತೆ ಬಹುತೇಕ ದೇವಸ್ಥಾನಗಳು ಭಕ್ತರಿಲ್ಲದೇ ಭಣಗುಡುತ್ತಿತ್ತು. 

ಧಾರ್ಮಿಕ ಕೇಂದ್ರಗಳ ರೀ ಓಪನ್ ಡೇಂಜರ್.. ಡೇಂಜರ್..! ಟಾಸ್ಕ್‌ ಫೋರ್ಸ್ ತಜ್ಞರ ಕಳವಳ

ಎಲ್ಲೆಡೆ ದೇಗುಲ ಪ್ರವೇಶಕ್ಕೂ ಮುನ್ನ ಸರ್ಕಾರದ ಮಾರ್ಗಸೂಚಿಯಂತೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ತೀರ್ಥ ಪ್ರಸಾದವಾಗಲಿ, ವಿಶೇಷ ಪೂಜೆಗಾಗಲಿ ಅವಕಾಶ ನೀಡಲಾಗಿಲ್ಲ. ಧರ್ಮಲ್ ಸ್ಕ್ರೀನಿಂಗ್ ನಡೆಸಿ ಎಲ್ಲರನ್ನೂ ಒಳ ಬಿಡಲಾಗುತ್ತಿತ್ತು. ಈ ಬಗ್ಗೆ ಸುವರ್ಣ ನ್ಯೂಸ್ ರಾಜ್ಯದ ಪ್ರಮುಖ ದೇವಸ್ಥಾನಗಳ ರಿಯಾಲಿಟಿ ಚೆಕ್ ನಡೆಸಿದೆ. ಇಲ್ಲಿದೆ ನೋಡಿ!