Shivamogga: ನಗರದಲ್ಲಿ ಹೈ ಅಲರ್ಟ್, ಇಂದು ಹೇಗಿದೆ ಶಿವಮೊಗ್ಗ.? ಗ್ರೌಂಡ್ ರಿಪೋರ್ಟ್

ಬಜರಂಗದಳ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಹರ್ಷನನ್ನು ಆರು ದುಷ್ಕರ್ಮಿಗಳು ಮನೆ ಸಮೀಪ ಅಟ್ಟಾಡಿಸಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡಿದ್ದ ಒಂದು ಕೋಮಿನ ಮಂದಿ ರಾತ್ರಿಯೇ ಕೆಲವೆಡೆ ಕಲ್ಲು ತೂರಿದ್ದಲ್ಲದೆ, ಒಂದಷ್ಟುವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದರು. 

First Published Feb 22, 2022, 10:40 AM IST | Last Updated Feb 22, 2022, 10:47 AM IST

ಬೆಂಗಳೂರು (ಫೆ. 22): ಬಜರಂಗದಳ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಹರ್ಷನನ್ನು ಆರು ದುಷ್ಕರ್ಮಿಗಳು ಮನೆ ಸಮೀಪ ಅಟ್ಟಾಡಿಸಿ ಬರ್ಬರವಾಗಿ ಹತ್ಯೆ ಮಾಡಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡಿದ್ದ ಒಂದು ಕೋಮಿನ ಮಂದಿ ರಾತ್ರಿಯೇ ಕೆಲವೆಡೆ ಕಲ್ಲು ತೂರಿದ್ದಲ್ಲದೆ, ಒಂದಷ್ಟುವಾಹನಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದರು. 

Shivamogga Riots: ವ್ಯಾಪಕ ಹಿಂಸೆ, 2 ದಿನ ನಿಷೇಧಾಜ್ಞೆ ವಿಸ್ತರಣೆ, ಶಾಲಾ-ಕಾಲೇಜುಗಳಿಗೂ ರಜೆ

ಮೃತದೇಹ ಸೀಗೆಹಟ್ಟಿಯಲ್ಲಿರುವ ಹರ್ಷನ ಮನೆ ತಲುಪುವವರೆಗೂ ಸುಮಾರು ಒಂದು ಗಂಟೆ ಈ ಹಿಂಸಾಚಾರ, ಕಲ್ಲುತೂರಾಟ ಮುಂದುವರಿಯಿತು. ಈ ವೇಳೆ ಒಂದು ಕೋಮಿನವರು ಮಚ್ಚು, ಲಾಂಗ್‌, ದೊಣ್ಣೆ ಹಿಡಿದು ಶಕ್ತಿ ಪ್ರದರ್ಶಿಸಿದ್ದರಿಂದ ಪರಸ್ಪರ ಹಲ್ಲೆ, ಪ್ರತಿ ಹಲ್ಲೆ ನಡೆಸುವ ಆತಂಕವೂ ನಿರ್ಮಾಣವಾಗಿತ್ತು. ಇನ್ನೂ ಎರಡು ದಿನ ನಿಷೇಧಾಜ್ಞೆಯನ್ನು ಮುಂದುವರೆಸಲಾಗಿದೆ. ಇಂದು ಶಿವಮೊಗ್ಗ ಹೇಗಿದೆ..? ಜನ ಏನಂತಾರೆ..? ಗ್ರೌಂಡ್ ರಿಪೋರ್ಟ್. 

Video Top Stories