47 ಇದಿನಗಳಿಂದ ಹಸಿರು ವಲಯದಲ್ಲಿದ್ದ ಘಟ್ಟನಗರಿಗೆ ವಕ್ಕರಿಸಿದ ತಬ್ಲಿಘಿಗಳು

ಮುಖ್ಯಮಂತ್ರಿಗಳ ತವರು ಜಿಲ್ಲೆ, ಕಳೆದ 47 ದಿನಗಳಿಂದ ಹಸಿರು ವಲಯ ಎಂಬ ಹೆಗ್ಗಳಿಕೆಯಲ್ಲಿಯೇ ಇದ್ದ ಘಟ್ಟನಗರಿ ಇದೀಗ ಒಂದೇ ಬಾರಿಗೆ ಬೆಚ್ಚಿ ಬಿದ್ದಿದೆ. ಇಡೀ ದೇಶವನ್ನು ಕಾಡಿದ ತಬ್ಲೀಘಿಗಳು ಇದೀಗ ಮಲೆನಾಡಿಗೂ ಸೋಂಕು ತಗುಲಿಸಿದ್ದಾರೆ. ಅಹ್ಮದಾಬಾದಿನಿಂದ ತಬ್ಲೀಘಿಗಳಾಗಿ ತವರಿಗೆ ಮರಳಿದ 8 ಮಂದಿ ಕೊರೋನಾ ಸೋಂಕನ್ನು ತಂದಿದ್ದಾರೆ.

First Published May 11, 2020, 7:12 PM IST | Last Updated May 11, 2020, 9:06 PM IST

ಬೆಂಗಳೂರು (ಮೇ. 11): ಮುಖ್ಯಮಂತ್ರಿಗಳ ತವರು ಜಿಲ್ಲೆ, ಕಳೆದ 47 ದಿನಗಳಿಂದ ಹಸಿರು ವಲಯ ಎಂಬ ಹೆಗ್ಗಳಿಕೆಯಲ್ಲಿಯೇ ಇದ್ದ ಘಟ್ಟನಗರಿ ಇದೀಗ ಒಂದೇ ಬಾರಿಗೆ ಬೆಚ್ಚಿ ಬಿದ್ದಿದೆ. ಇಡೀ ದೇಶವನ್ನು ಕಾಡಿದ ತಬ್ಲೀಘಿಗಳು ಇದೀಗ ಮಲೆನಾಡಿಗೂ ಸೋಂಕು ತಗುಲಿಸಿದ್ದಾರೆ. ಅಹ್ಮದಾಬಾದಿನಿಂದ ತಬ್ಲೀಘಿಗಳಾಗಿ ತವರಿಗೆ ಮರಳಿದ 8 ಮಂದಿ ಕೊರೋನಾ ಸೋಂಕನ್ನು ತಂದಿದ್ದಾರೆ.

ಲಾಕ್‌ಡೌನ್‌ ಸಡಿಲ: ಸಂಚಾರಕ್ಕೆ ಮುಕ್ತ ಅವಕಾಶ, ಕಾಫಿನಾಡು ಶೇಕ್‌ ಶೇಕ್‌!

ಶನಿವಾರವರಷ್ಟೇ ಅಹ್ಮದಾಬಾದಿನಿಂದ ಬಸ್ಸೊಂದರಲ್ಲಿ ಇಲ್ಲಿಗೆ ಆಗಮಿಸಿದ್ದ 9 ಮಂದಿಯನ್ನು ಪ್ರತ್ಯೇಕವಾಗಿ ಕ್ವಾರಂಟೈನ್‌ನಲ್ಲಿ ಇರಿಸಿ ತಪಾಸಣೆಗೆ ಒಳಪಡಿಸಲಾಗಿತ್ತು. ಇಂದು ಮುಂಜಾನೆ ಇವರಲ್ಲಿ 8 ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಇವರಲ್ಲಿ 7 ಮಂದಿ ಶಿಕಾರಿಪುರದವರಾಗಿದ್ದರೆ, ಓರ್ವರು ತೀರ್ಥಹಳ್ಳಿ ತಾಲೂಕಿನ ಕೋಣಂದೂರಿನವರಾಗಿದ್ದರೆ.

'ನೀವು ಹೋದ್ರೆ ಕೊರೋನಾ ಬರುತ್ತೆ' ಬಸ್‌ನಲ್ಲಿಯೇ ಮಹಿಳೆಯರ ಮೇಲೆ ಹಲ್ಲೆ'

"

Video Top Stories