Asianet Suvarna News Asianet Suvarna News

ಶಿವಮೊಗ್ಗ ಕ್ರಷರ್ ಗಣಿ ಸ್ಪೋಟಕ್ಕೆ ಸಿಕ್ಕಿದೆ ಇನ್ನೊಂದು ಟ್ವಿಸ್ಟ್, ಸ್ಪೋಟಕ್ಕೆ ಕಾರಣವಾಯ್ತಾ ಈ ವಸ್ತು..?

ಶಿವಮೊಗ್ಗ ಜಿಲ್ಲೆ ಹುಣಸೋಡು ಕಲ್ಲು ಕ್ವಾರಿಯಲ್ಲಿ ನಡೆದಿರುವ ಸ್ಫೋಟದ ಬೇರೆ ಬೇರೆ ಆಯಾಮಗಳು ಹೊರಬರುತ್ತಿವೆ.  ಬೃಹತ್‌ ಕಲ್ಲು ಬಂಡೆಗಳನ್ನು ಸಿಡಿಸಲು ಬಳಸುವ ಅಮೋನಿಯಂ ನೈಟ್ರೇಟ್‌ ಸ್ಫೋಟಕ್ಕೆ  ಕಾರಣವಾಗಿರಬಹುದು ಎಂಬ ಅನುಮಾನ ಪೊಲೀಸ್‌ ಇಲಾಖೆಯಲ್ಲಿ ವ್ಯಕ್ತವಾಗಿದೆ.
 

ಶಿವಮೊಗ್ಗ (ಜ. 24):  ಹುಣಸೋಡು ಕಲ್ಲು ಕ್ವಾರಿಯಲ್ಲಿ ನಡೆದಿರುವ ಸ್ಫೋಟದ ಬೇರೆ ಬೇರೆ ಆಯಾಮಗಳು ಹೊರಬರುತ್ತಿವೆ.  ಬೃಹತ್‌ ಕಲ್ಲು ಬಂಡೆಗಳನ್ನು ಸಿಡಿಸಲು ಬಳಸುವ ಅಮೋನಿಯಂ ನೈಟ್ರೇಟ್‌ ಸ್ಫೋಟಕ್ಕೆ  ಕಾರಣವಾಗಿರಬಹುದು ಎಂಬ ಅನುಮಾನ ಪೊಲೀಸ್‌ ಇಲಾಖೆಯಲ್ಲಿ ವ್ಯಕ್ತವಾಗಿದೆ.

ಹಳೆ 100 ರೂ ನೋಟು ಮಾರ್ಚ್‌ಗೆ ಅಮಾನ್ಯ: ನಿಮ್ಮ ಮುಂದಿನ ಆಯ್ಕೆ ಇದು!

ಶಿವಮೊಗ್ಗದ ಕಲ್ಲು ಕ್ವಾರಿಗೆ ಲಾರಿಯಲ್ಲಿ ಗುರುವಾರ ರಾತ್ರಿ ಜಿಲೆಟಿನ್‌ ಹಾಗೂ ಅಮೋನಿಯಂ ನೈಟ್ರೇಟ್‌ ಅನ್ನು ಒಟ್ಟಿಗೆ ಸಾಗಿಸಿರುವ ಸಾಧ್ಯತೆಗಳಿವೆ. ಆಗ ಬಾಕ್ಸ್‌ಗಳನ್ನು ಒತ್ತೊತ್ತಾಗಿ ಪೇರಿಸಿಟ್ಟಿದ್ದ ಕಾರಣ ಬಿಸಿ ಹೆಚ್ಚಾಗಿ ಕಿಡಿ ಹೊತ್ತಿಕೊಂಡು ಸ್ಫೋಟಕ ವಸ್ತುಗಳು ಸಿಡಿದಿರಬಹುದು. ಈ ಸ್ಫೋಟದ ತೀವ್ರತೆ ಗಮನಿಸಿದರೆ ಅಮೋನಿಯಂ ನೈಟ್ರೇಟ್‌ ಕಾರಣವಾಗಿರುವ ಗುಮಾನಿ ಇದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಸ್ಫೋಟದ ಬಗ್ಗೆ ಇನ್ನಷ್ಟು ಮಾಹಿತಿ ಏನಿದೆ ನೋಡೋಣ ಬನ್ನಿ..!