ಟ್ರಾಫಿಕ್ ಕಿರಿಕಿರಿಯಿಲ್ಲ, ಕಾಯಬೇಕಾಗಿಲ್ಲ, ಈ ರಸ್ತೆಯಲ್ಲಿ ಸೈಕ್ಲಿಸ್ಟ್‌ಗಳಿಗೆ ಆರಾಮ!

ಇತ್ತೀಚಿಗೆ ಕಚೇರಿಗಳಿಗೆ ಸೈಕಲ್‌ನಲ್ಲಿ ತೆರಳುವ ಕ್ರೇಜ್ ಶುರುವಾಗಿದೆ. ಟ್ರಾಫಿಕ್ ಮಧ್ಯೆ ಅಲ್ಲಲ್ಲಿ ಸೈಕಲನ್ನು ನೋಡುತ್ತೇವೆ. ಟ್ರಾಫಿಕ್ ಜಾಮ್‌ನಲ್ಲಿ ಸೈಕಲ್ ಸವಾರಿ ಮಾಡುವುದು ಸವಾರರಿಗೆ ಸವಾಲೇ ಸರಿ. ಸೈಕಲ್‌ಗೆಂದೇ ಪ್ರತ್ಯೇಕ ಲೇನ್ ಇದ್ದರೆ ಹೇಗೆ ಅಲ್ವಾ..? 

First Published Jan 30, 2021, 5:16 PM IST | Last Updated Jan 30, 2021, 5:16 PM IST

ಬೆಂಗಳೂರು (ಜ. 30): ಇತ್ತೀಚಿಗೆ ಕಚೇರಿಗಳಿಗೆ ಸೈಕಲ್‌ನಲ್ಲಿ ತೆರಳುವ ಕ್ರೇಜ್ ಶುರುವಾಗಿದೆ. ಟ್ರಾಫಿಕ್ ಮಧ್ಯೆ ಅಲ್ಲಲ್ಲಿ ಸೈಕಲನ್ನು ನೋಡುತ್ತೇವೆ. ಟ್ರಾಫಿಕ್ ಜಾಮ್‌ನಲ್ಲಿ ಸೈಕಲ್ ಸವಾರಿ ಮಾಡುವುದು ಸವಾರರಿಗೆ ಸವಾಲೇ ಸರಿ. ಸೈಕಲ್‌ಗೆಂದೇ ಪ್ರತ್ಯೇಕ ಲೇನ್ ಇದ್ದರೆ ಹೇಗೆ ಅಲ್ವಾ..? ಬೆಂಗಳೂರಿನ ಹೃದಯ ಭಾಗದಲ್ಲಿರುವ ರೇಸ್‌ಕೋರ್ಸ್ ರಸ್ತೆಯಲ್ಲಿ ಸೈಕಲ್‌ಗಾಗಿ ಪ್ರತ್ಯೇಕ ಲೇನ್ ಮಾಡಲಾಗಿದೆ.

 ಬಿಎಸ್‌ಸಿಎಲ್‌ ಸೈಕ್ಲಿಂಗ್‌ ಗಾಗಿ 5 ಕಿಮೀ ಉದ್ದದ ಪಥ ನಿರ್ಮಾಣಕ್ಕೆ ಮುಂದಾಗಿದ್ದು, ಮಿನ್ಸ್ ಸ್ಕ್ವೇರ್ - ರಾಜಭವನ ರಸ್ತೆ - ಬಸವೇಶ್ವರ ಸರ್ಕಲನ್ನು ಸಂಪರ್ಕಿಸುತ್ತದೆ. ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ.