Asianet Suvarna News Asianet Suvarna News

ಇಂದಿನಿಂದ ಬೆಂಗಳೂರಲ್ಲಿ ಸೆಮಿಕಾನ್‌ ಇಂಡಿಯಾ ಸಮ್ಮೇಳನ: ಪ್ರಧಾನಿ ಮೋದಿ ಉದ್ಘಾಟನೆ

ಇಂದಿನಿಂದ 3 ದಿನಗಳ ಕಾಲ ಬೆಂಗಳೂರಿನಲ್ಲಿ ಸೆಮಿಕಾನ್ ಇಂಡಿಯಾ 2022 ಸಮ್ಮೇಳನ (Semicon India 2022) ನಡೆಯಲಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ (PM Modi) ಚಾಲನೆ ನೀಡಲಿದ್ದಾರೆ. 

ಬೆಂಗಳೂರು (ಏ. 29): ಇಂದಿನಿಂದ 3 ದಿನಗಳ ಕಾಲ ಬೆಂಗಳೂರಿನಲ್ಲಿ ಸೆಮಿಕಾನ್ ಇಂಡಿಯಾ 2022 ಸಮ್ಮೇಳನ (Semicon India 2022) ನಡೆಯಲಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ (PM Modi) ಚಾಲನೆ ನೀಡಲಿದ್ದಾರೆ. 

PSI Recruitment Scam:ಮಾಸ್ಟರ್ ಮೈಂಡ್ ದಿವ್ಯಾ ಹಾಗರಗಿ ಬಂಧನವಾಗಿದ್ದು ಹೇಗೆ?

ಸೆಮಿಕಂಡಕ್ಟರ್‌ ಉತ್ಪಾದನೆಯಲ್ಲಿ ಭವಿಷ್ಯದಲ್ಲಿ ಭಾರತ ವಿಶ್ವ ನಾಯಕನ ಪಟ್ಟಅಲಂಕರಿಸಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಎರಡು ದಶಕಗಳನ್ನು ದೂರದೃಷ್ಟಿಯಲ್ಲಿ ಇಟ್ಟುಕೊಂಡು ಸೆಮಿ ಕಂಡಕ್ಟರ್‌ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ ಎಂದು ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ (Rajeev Chanrasekhar) ತಿಳಿಸಿದ್ದಾರೆ.

ರಾಜಕೀಯ ದೂರದೃಷ್ಟಿಕೊರತೆಯಿಂದೆ ಈ ಕ್ಷೇತ್ರಕ್ಕೆ ಸರಿಯಾಗಿ ಆದ್ಯತೆ ಸಿಕ್ಕಿರಲಿಲ್ಲ. ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ಡಿಜಿಟಲ್‌ ಇಂಡಿಯಾಕ್ಕೆ ಆದ್ಯತೆ ಹೆಚ್ಚಾಯಿತು. ಅದರಂತೆ ಸೆಮಿಕಂಡಕ್ಟರ್‌ ಉದ್ಯಮಕ್ಕೂ ಆದ್ಯತೆ ಸಿಕ್ಕಿತು. ಸೆಮಿಕಂಡಕ್ಟರ್‌ ಉದ್ಯಮ ಈ ಹಿಂದೆ .6 ಲಕ್ಷ ಕೋಟಿ ಮೊತ್ತದ ವ್ಯವಹಾರ ನಡೆಸುತ್ತಿತ್ತು. ಇಂದು ಈ ವ್ಯವಹಾರ .25 ಲಕ್ಷ ಕೋಟಿಗೆ ತಲುಪಿದೆ ಅಂದರೆ 300 ಬಿಲಿಯನ್‌ ಬಿಸಿನೆಸ್‌ ಆಗಿದೆ. ಐದು ಪಟ್ಟು ಹೆಚ್ಚಳವಾಗಿದೆ ಎಂದರ್ಥ ಎಂದರು.

Video Top Stories