Hijab Row: 'ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡಲು ಸಂಘಪಪರಿವಾರದ ಹುನ್ನಾರ'

ಸಂಘ ಪರಿವಾರದವರು (Sangh Parivara) ಹಿಜಾಬ್ ಬಗ್ಗೆ ವಿವಾದ (Hijab Row) ಹುಟ್ಟು ಹಾಕಿದ್ದಾರೆ. ಹಿಜಾಬ್ ಧರಿಸುವುದು ನಿನ್ನೆ ಮೊನ್ನೆಯದಲ್ಲ, ಲಾಗಾಯ್ತಿನಿಂದಲೂ ಆಚರಿಸಿಕೊಂಡು ಬಂದಿದ್ದಾರೆ: ಸಿದ್ದರಾಮಯ್ಯ

First Published Feb 18, 2022, 5:35 PM IST | Last Updated Feb 18, 2022, 5:35 PM IST

ಬೆಂಗಳೂರು (ಫೆ. 18): ಸಂಘ ಪರಿವಾರದವರು (Sangh Parivar) ಹಿಜಾಬ್ ಬಗ್ಗೆ ವಿವಾದ (Hijab Row)  ಹುಟ್ಟು ಹಾಕಿದ್ದಾರೆ. ಹಿಜಾಬ್ ಧರಿಸುವುದು ನಿನ್ನೆ ಮೊನ್ನೆಯದಲ್ಲ, ಲಾಗಾಯ್ತಿನಿಂದಲೂ ಆಚರಿಸಿಕೊಂಡು ಬಂದಿದ್ದಾರೆ. ಕಾಲ ಕ್ರಮೇಣ ಕೆಲವು ವಿದ್ಯಾರ್ಥಿಗಳು ಹಾಕದೇ ಇರಬಹುದು. ಆದರೆ ಕೆಲವು ವಿದ್ಯಾರ್ಥಿಗಳು ಇದನ್ನು ಪಾಲಿಸುತ್ತಿದ್ದಾರೆ. ಹಿಜಾಬ್ ಹಾಕುವುದರಿಂದ ಯಾರಿಗೂ ತೊಂದರೆ ಇಲ್ಲ. ಧರ್ಮದ ಸಂಪ್ರದಾಯಗಳನ್ನು ಅವರು ಪಾಲಿಸುತ್ತಾರೆ. ಇದರಲ್ಲಿ ತಪ್ಪೇನಿದೆ..? ಹಿಜಾಬ್ ವಿಷಯ ವಿವಾದ ಮಾಡಿ, ಮುಸ್ಲಿಂ ಹೆಣ್ಣು ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದ್ದಾರೆ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಾಗ್ದಾಳಿ ನಡೆಸಿದರು. 

ರಾಜೀನಾಮೆಗೆ ಕಾಂಗ್ರೆಸ್ ಬಿಗಿಪಟ್ಟು, ಇದಕ್ಕೆಲ್ಲಾ ಬಗ್ಗಲ್ಲ, ಜಗ್ಗಲ್ಲ, ನೋ ರಿಸೈನ್ ಎಂದ ಈಶ್ವರಪ್ಪ!

Video Top Stories