ಇಂದ್ರಜಿತ್ - ಸಂದೇಶ್ ಅಡಿಯೋ ಬಹಿರಂಗ: ಹೇಳಿದ್ದು, ಕೇಳಿದ್ದು ಯಾವುದು ಸತ್ಯ..?
- ನಮ್ಮ ಸಿಬ್ಬಂದಿಗೆ ದರ್ಶನ್ ಹಲ್ಲೆ ಮಾಡ್ತಿದ್ರೆ, 15 ಜನ ನೋಡ್ತಿದ್ರು
- ಇಂದ್ರಜಿತ್ ಲಂಕೇಶ್ ಜತೆ ಸಂದೇಶ್ ಸಂಭಾಷಣೆ
- ಮೈಸೂರು ಹೋಟೆಲ್ ಮಾಲಿಕ ಸಂದೇಶ್ ಆಡಿಯೋ ಬಹಿರಂಗ
ಬೆಂಗಳೂರು (ಜು. 17): ಮೈಸೂರಿನ ‘ಸಂದೇಶ್ ಪ್ರಿನ್ಸ್’ ಹೋಟೆಲ್ ಸಿಬ್ಬಂದಿ ಮೇಲೆ ನಟ ದರ್ಶನ್ ಹಲ್ಲೆ ನಡೆಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ದಿನಕ್ಕೊಂದು ತಿರುವು ಲಭಿಸುತ್ತಿದ್ದು, ದರ್ಶನ್ ಹಲ್ಲೆ ನಡೆಸಿದ್ದಾರೆ ಎಂದು ಖುದ್ದು ಹೋಟೆಲ್ ಮಾಲಿಕ ಒಪ್ಪಿಕೊಂಡಿರುವ ಆಡಿಯೋವೊಂದು ಎಲ್ಲೆಡೆ ವೈರಲ್ ಆಗಿದೆ.
ದರ್ಶನ್ ಹಲ್ಲೆ ಕೇಸ್‌ಗೆ ಟ್ವಿಸ್ಟ್: ಮಿಡ್ ನೈಟ್ ರಹಸ್ಯ ಬಿಚ್ಚಿಟ್ಟ ಸ್ನೇಹಿತ ಹರ್ಷ ಮೆಲಂಟಾ
ಪತ್ರಕರ್ತ ಇಂದ್ರಜಿತ್ ಲಂಕೇಶ್ ಜೊತೆ ಹೋಟೆಲ್ ಮಾಲಿಕ ಸಂದೇಶ್ ನಡೆಸಿರುವ ಸಂಭಾಷಣೆಯಲ್ಲಿ ಹಲ್ಲೆ ನಡೆದಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಈ ಆಡಿಯೋದಲ್ಲಿನ ಸಂಪೂರ್ಣ ಮಾಹಿತಿ ಇಲ್ಲಿದೆ. ಹಾಗಾದರೆ ಆಡಿಯೋದಲ್ಲಿ ಏನಿದೆ..? ಹೇಳಿದ್ದು ಸತ್ಯನಾ.? ಕೇಳಿದ್ದು ಸತ್ಯನಾ..?