Russia-Ukraine War: ನವೀನ್ ಪೋಷಕರ ಹೇಳಿಕೆಗೆ ಸಚಿವ ಶಿವರಾಂ ಹೆಬ್ಬಾರ್ ಸಹಮತ
'ನಮ್ಮ ವ್ಯವಸ್ಥೆ ಬಗ್ಗೆ ಪೋಷಕರ ಹೇಳಿಕೆಗೆ ನಾನು ಸಹಮತಿಸುತ್ತೇನೆ. ಯಾರದ್ದೋ ತಪ್ಪಿಗೆ ಈ ಮಗುವನ್ನು ಕಳೆದುಕೊಳ್ಳಬೇಕಾಯಿತು. ದೇಶದ ಇಂದಿನ ವ್ಯವಸ್ಥೆ, ಇಂತಹ ಅನಾಹುತಕ್ಕೆ ತಳ್ಳುತ್ತದೆ. ವೈದ್ಯಕೀಯ ಶಿಕ್ಷಣ ದುಬಾರಿಯಾಗಿದೆ. ಈ ಬಗ್ಗೆ ಚರ್ಚೆ ಮಾಡಲೇಬೇಕಾಗಿದೆ' ಎಂದು ಸಚಿವ ಶಿವರಾಂ ಹೆಬ್ಬಾರ್ ಹೇಳಿದ್ದಾರೆ.
ಹಾವೇರಿ (ಮಾ. 02): ಕಳೆದ 6 ದಿನಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಭೀಕರ ಯುದ್ಧ ಇದೀಗ ಕನ್ನಡಿಗ ವಿದ್ಯಾರ್ಥಿಯನ್ನು ಬಲಿ ಪಡೆದಿದೆ. ಉಕ್ರೇನ್‌ನ ಖಾರ್ಕೀವ್‌ನ ಕಟ್ಟಡವೊಂದನ್ನು ಗುರಿಯಾಗಿಸಿ ಮಂಗಳವಾರ ಬೆಳಗ್ಗೆ ರಷ್ಯಾ ನಡೆಸಿದ ಭೀಕರ ದಾಳಿಯಲ್ಲಿ ಹಾವೇರಿ ಜಿಲ್ಲೆಯ ಚಳಗೇರಿ ಮೂಲದ ವೈದ್ಯ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್ ಸಾವಿಗೀಡಾಗಿದ್ದಾರೆ. ಇವರು ರಷ್ಯಾ-ಉಕ್ರೇನ್ ಯುದ್ಧದಲ್ಲಿ ಸಾವಿಗೀಡಾದ ಮೊದಲ ಭಾರತೀಯ.