Asianet Suvarna News Asianet Suvarna News

ಬೆಂಗಳೂರಿನ ಫುಡ್‌ ಸ್ಟ್ರೀಟ್‌ಗೆ ಹೋಗುವವರೇ ಹುಷಾರ್..!

ಮಹಾರಾಷ್ಟ್ರದಿಂದ ಬಂದಿದ್ದ ಮಹಿಳೆಗೆ ಸೋಂಕು ದೃಢಪಟ್ಟಿತ್ತು. ರಿಪೋರ್ಟ್ ಬರುವ ಮುನ್ನವೇ ಕ್ವಾರಂಟೈನ್‌ನಲ್ಲಿದ್ದ ಮಹಿಳೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಬಿಡುಗಡೆಯಾದ 3 ದಿನಕ್ಕೆ ಕೊರೊನಾ ಫಾಸಿಟಿವ್ ಬಂದಿದೆ. ಅಧಿಕಾರಿಗಳ ಯಡವಟ್ಟಿನಿಂದಾಗಿ ಫುಡ್‌ ಸ್ಟ್ರೀಟ್ ಸೀಲ್‌ ಡೌನ್ ಆಗಿದೆ.  

ಬೆಂಗಳೂರು(ಜೂ.03): ನಗರದ ಫುಡ್‌ ಸ್ಟ್ರೀಟ್‌ಗೆ ಹೋಗುವವರೇ ಹುಷಾರ್..! ವಿವಿ ಪುರಂನಲ್ಲಿರುವ ಫುಡ್‌ ಸ್ಟ್ರೀಟ್‌ಗೆ ಹೋಗುವವರು ಈ ಸುದ್ದಿಯನ್ನು ನೋಡಲೇಬೇಕು. ವಿವಿ ಪುರಂ ಪಕ್ಕದ ರಸ್ತೆ ಸೀಲ್ ಡೌನ್ ಆಗಿದೆ. 7 ದಿನದ ಕ್ವಾರಂಟೈನ್ ಯಡವಟ್ಟಿನಿಂದ ರಸ್ತೆ ಸೀಲ್‌ಡೌನ್ ಆಗಿದೆ.

ನಾಲಿಗೆ ರುಚಿ ಬೇಕು ಅಂತ ರಸ್ತೆ ಬದಿ ಚಾಟ್ಸ್ ತಿನ್ನಲು ಹೋದರೆ ಬೆಲೆ ತೆರಬೇಕಾಗಬಹುದು. ಮುಂಬೈ ವೈರಸ್‌ ಬಾಯಿ ತೆರೆದುಕೊಂಡು ಕುಳಿತಿರುವ ಸಾಧ್ಯತೆಯಿದೆ. 

ಮಲ್ಲೇಶ್ವರಂನ ಬ್ಯಾಂಕ್ ಸಿಬ್ಬಂದಿಗೆ ಅಂಟಿದ ಕೊರೋನಾ ಸೋಂಕು

ಮಹಾರಾಷ್ಟ್ರದಿಂದ ಬಂದಿದ್ದ ಮಹಿಳೆಗೆ ಸೋಂಕು ದೃಢಪಟ್ಟಿತ್ತು. ರಿಪೋರ್ಟ್ ಬರುವ ಮುನ್ನವೇ ಕ್ವಾರಂಟೈನ್‌ನಲ್ಲಿದ್ದ ಮಹಿಳೆಯನ್ನು ಡಿಸ್ಚಾರ್ಜ್ ಮಾಡಲಾಗಿದೆ. ಬಿಡುಗಡೆಯಾದ 3 ದಿನಕ್ಕೆ ಕೊರೊನಾ ಫಾಸಿಟಿವ್ ಬಂದಿದೆ. ಅಧಿಕಾರಿಗಳ ಯಡವಟ್ಟಿನಿಂದಾಗಿ ಫುಡ್‌ ಸ್ಟ್ರೀಟ್ ಸೀಲ್‌ ಡೌನ್ ಆಗಿದೆ.  

Video Top Stories