Asianet Suvarna News Asianet Suvarna News

ರಾಜಧಾನಿಯಲ್ಲಿ ಡೆಲ್ಟಾ ರೂಪಾಂತರಿ ಪತ್ತೆ, ಇನ್ನೊಂದೆಡೆ ಹೆಚ್ಚಾಗುತ್ತದೆ ನಿಪಾ ಭೀತಿ

Sep 11, 2021, 4:31 PM IST

ಬೆಂಗಳೂರು (ಸೆ. 11): ರಾಜಧಾನಿಯ ಇಬ್ಬರಲ್ಲಿ ಡೆಲ್ಟಾ ರೂಪಾಂತರಿ ತಳಿ ಪತ್ತೆಯಾಗಿದೆ. ಇದು ಆತಂಕವನ್ನು ಹುಟ್ಟು ಹಾಕಿದೆ. ಇನ್ನು ಕೇರಳದಲ್ಲಿ 'ನಿಪಾ' ವೈರಸ್ ಕಾಣಿಸಿಕೊಂಡಿದೆ.

 ಕೇರಳದಿಂದ ಬರುವವರಲ್ಲಿ ಕೋವಿಡ್‌ ಸೋಂಕು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಇನ್ನೊಂದೆಡೆ ರಾಜ್ಯದಲ್ಲಿ ಮಳೆಗಾಲವಿನ್ನೂ ಮುಗಿದಿಲ್ಲ. ಚಿಕೂನ್ ಗೂನ್ಯ, ಡೇಂಘೀ ಜ್ವರದ ಭೀತಿ ಕೂಡಾ ಶುರುವಾಗಿದೆ. ಡೆಲ್ಟಾ ರೂಪಾಂತರಿ, ನಿಪಾ,  ಚಿಕೂನ್ ಗೂನ್ಯ, ಡೇಂಘೀ ಹೀಗೆ ಕಾಯಿಲೆಗಳ ಕೂಪವಾಗಿ ಕರ್ನಾಟಕ. ಈ ಬಗ್ಗೆ ವಹಿಸಬೇಕಾದ ಎಚ್ಚರಿಕೆ ಏನು..? ಇಲ್ಲಿದೆ ನೋಡಿ..!