Asianet Suvarna News Asianet Suvarna News

ಕುಡುಕರಿಗೆ ಶಾಕಿಂಗ್ ನ್ಯೂಸ್: ಎಣ್ಣೆ ರೇಟ್ ಹೆಚ್ಚಳ..!

40 ದಿನಗಳ ಬಳಿಕ ಇಂದಿನಿಂದ(ಮೇ.04) ಮದ್ಯ ಪ್ರಿಯರ ಮನ ತಣಿಸಲು ಎಣ್ಣೆ ಅಂಗಡಿ ಆರಂಭವಾಗಿದೆ. ಒಂದು ಕಡೆ ಕುಡುಕರಿಗೆ ಇದು ಸಿಹಿಸುದ್ದಿಯಾದರೆ ಮತ್ತೊಂದೆಡೆ ಬೆಲೆ ಏರಿಕೆಯ ಬಿಸಿ ಮದ್ಯ ಪ್ರಿಯರ ನಾಲಿಗೆ ಸುಡುವುದು ಗ್ಯಾರಂಟಿ. 

ಬೆಂಗಳೂರು(ಮೇ.04): ಕೊರೋನಾ ವೈರಸ್‌ನಿಂದಾಗಿ ಕಳೆದ 40 ದಿನಗಳಿಂದ ಬಂದ್ ಆಗಿದ್ದ ಮದ್ಯದಂಗಡಿಗಳು ಇಂದು ಬಾಗಿಲು ತರೆದಿವೆ. ಆದರೆ ಕುಡುಕರ ಪಾಲಿಗೆ ಬೇವು-ಬೆಲ್ಲದಂತ ಸುದ್ದಿಯೊಂದು ಹೊರಬಿದ್ದಿದೆ.

ಹೌದು, 40 ದಿನಗಳ ಬಳಿಕ ಇಂದಿನಿಂದ ಮದ್ಯ ಪ್ರಿಯರ ಮನ ತಣಿಸಲು ಎಣ್ಣೆ ಅಂಗಡಿ ಆರಂಭವಾಗಿದೆ. ಒಂದು ಕಡೆ ಕುಡುಕರಿಗೆ ಇದು ಸಿಹಿಸುದ್ದಿಯಾದರೆ ಮತ್ತೊಂದೆಡೆ ಬೆಲೆ ಏರಿಕೆಯ ಬಿಸಿ ತಟ್ಟುವ ಕಹಿ ಸುದ್ದಿ ಮದ್ಯ ಪ್ರಿಯರ ನಾಲಿಗೆ ಸುಡುವುದು ಗ್ಯಾರಂಟಿ. 

"

40 ದಿನದ ನಂತರ ಮದ್ಯದಂಗಡಿ ಓಪನ್‌: ಆದ್ರೆ ಎಣ್ಣೆ ಬೆಲೆ ದುಬಾರಿ!

ಏಪ್ರಿಲ್ 01ರಿಂದಲೇ ರಾಜ್ಯ ಸರ್ಕಾರ ಮದ್ಯದ ದರವನ್ನು ಪರಿಷ್ಕರಿಸಿದೆ. ಆದರೆ ಇಂದು ಮಾತ್ರ ಹಳೆಯ ದರಕ್ಕೆ ಲಿಕ್ಕರ್ ಮಾರಾಟ ನಡೆಯಲಿದೆ. ಆದರೆ ಮುಂದಿನ ದಿನಗಳಲ್ಲಿ ಮದ್ಯದ ದರ ದುಬಾರಿಯಾಗಲಿದೆ. ಶೇ.6% ದರವನ್ನು ರಾಜ್ಯಸರ್ಕಾರ ಹೆಚ್ಚಿಸಿದೆ.

ಮದ್ಯ ಮಾರಾಟ ಪ್ರಕ್ರಿಯೆ ಹೇಗಿದೆ ಎನ್ನುವುದರ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.

Video Top Stories