Asianet Suvarna News Asianet Suvarna News

ಕೊರೊನಾ ಪಾಸಿಟಿವ್ ಬಂದ ಕೆಲವರಲ್ಲಿ ಹಾರ್ಟ್ ಅಟ್ಯಾಕ್ ಆಗುತ್ತಿರುವುದೇಕೆ..?

ಕೊರೊನಾ 2 ನೇ ಅಲೆಯ ಭೀಕರತೆ ತೀವ್ರವಾಗಿದ್ದು, ಸೋಂಕು ತಗುಲಿದರೆ ಸಾಕು ಸಾವೇ ಗತಿಯೇನೋ ಎನ್ನುವ ಹಾಗೆ ಭಯ ಬೀಳಿಸುತ್ತಿದೆ. ಅದರಲ್ಲೂ ಚಿಕ್ಕ ವಯಸ್ಸಿನವರೇ ಸೋಂಕಿಗೆ ಬಲಿಯಾಗುತ್ತಿರುವುದು, ಸೋಂಕು ತಗುಲಿದವರಿಗೆ ಹಾರ್ಟ್ ಅಟ್ಯಾಕ್ ಆಗುತ್ತಿರುವುದು ಭಯ ಬೀಳಿಸಿದೆ. 

ಬೆಂಗಳೂರು (ಮೇ. 02): ಕೊರೊನಾ 2 ನೇ ಅಲೆಯ ಭೀಕರತೆ ತೀವ್ರವಾಗಿದ್ದು, ಸೋಂಕು ತಗುಲಿದರೆ ಸಾಕು ಸಾವೇ ಗತಿಯೇನೋ ಎನ್ನುವ ಹಾಗೆ ಭಯ ಬೀಳಿಸುತ್ತಿದೆ. ಅದರಲ್ಲೂ ಚಿಕ್ಕ ವಯಸ್ಸಿನವರೇ ಸೋಂಕಿಗೆ ಬಲಿಯಾಗುತ್ತಿರುವುದು, ಸೋಂಕು ತಗುಲಿದವರಿಗೆ ಹಾರ್ಟ್ ಅಟ್ಯಾಕ್ ಆಗುತ್ತಿರುವುದು ಭಯ ಬೀಳಿಸಿದೆ.

ಕೊರೊನಾ 2 ನೇ ಅಲೆಯೇ ಭೀಕರ, ಅಕ್ಟೋಬರ್‌ನಲ್ಲಿ ಬರಲಿದೆಯಂತೆ 3 ನೇ ಅಲೆ..!

ಸೋಂಕಿತರಿಗೆ ಹಾರ್ಟ್ ಅಟ್ಯಾಕ್ ಯಾಕಾಗಿ ಆಗುತ್ತಿದೆ ಎಂದು ನೋಡಿದರೆ ಖ್ಯಾತ ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ ಹೇಳೋದು ಹೀಗೆ. ಹೃದಯಕ್ಕೆ ನುಗ್ಗುವ ಕೊರೊನಾ ವೈರಸ್ ಮೊದಲು ಹೃದಯದ ಸ್ನಾಯುಗಳನ್ನು ಡ್ಯಾಮೇಜ್ ಮಾಡಿ ಬಿಡುತ್ತದೆ. ದೇಹದ ಕಣಕಣಗಳಿಗೆ ವೈರಸ್ ಸೋಂಕು ತಗುಲಿದಾಗ ದೇಹದಲ್ಲಿರುವ ಬೇರೆ ಬೇರೆ ಅಂಗಗಳು ಡ್ಯಾಮೇಜ್ ಆಗಿ ಬಿಡುತ್ತದೆ.