Asianet Suvarna News Asianet Suvarna News

ಸಂಗೂರು ಕಾರ್ಖಾನೆ ಬಗ್ಗೆ ತನಿಖೆಗೆ ನಾವು ಸಿದ್ದ: ಸಿದ್ದರಾಮಯ್ಯಗೆ ಶ್ರೀರಾಮುಲು ಸವಾಲ್!

Oct 17, 2021, 4:35 PM IST

ಬೆಂಗಳೂರು (ಅ. 17): ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ಶ್ರೀರಾಮುಲು (Sriramulu) ಗುಡುಗಿದ್ದಾರೆ. 'ಸಂಗೂರು ಸಕ್ಕರೆ ಕಾರ್ಖಾನೆ ಮುಚ್ಚಿ 20 ವರ್ಷಗಳೇ ಆಗಿವೆ. ಹಳೆಯ ವಿಚಾರವನ್ನು ಎತ್ತಿ ಜನರ ಗಮನವನ್ನು ಬೇರೆಡೆ ಸೆಳೆಯುವ ಯತ್ನ ಮಾಡುತ್ತಿದ್ದಾರೆ. ಸಂಗೂರು ಕಾರ್ಖಾನೆ ಬಗ್ಗೆ ತನಿಖೆಗೆ ನಾವು ಸಿದ್ದ. ತಪ್ಪಿತಸ್ಥರಿದ್ರೆ ಶಿವರಾಜ ಸಜ್ಜನರ್ ರಾಜಕೀಯ ನಿವೃತ್ತಿ ಪಡೆಯುತ್ತಾರೆ' ಎಂದು ಶ್ರೀರಾಮುಲು ಹೇಳಿದ್ದಾರೆ. 

'ಸಿದ್ದರಾಮಯ್ಯನಂತ 'ಮನೆಮುರುಕರು' ಏಕವಚನ ಪ್ರಯೋಗವನ್ನೇ ಗ್ರಾಮೀಣ ಸಂಸ್ಕಾರ ಅಂದ್ಕೊಂಡಿದ್ದಾರೆ'

ಸಿದ್ದರಾಮಯ್ಯ ಸಿಎಂ ಅಗುವ ಕನಸು ಕಾಣುತ್ತಿದ್ದಾರೆ. ಅವರಿಗೆ ಸಿಎಂ ಅಗುವ ಚಿಂತೆ. ಜನರ ಅಭಿವೃದ್ಧಿ ಬಗ್ಗೆ ಗಮನವಿಲ್ಲ. ಪ್ರಧಾನಿಯವರ ಬಗ್ಗೆ ಮಾತನಾಡಿದರೆ ತಾವೂ ದೊಡ್ಡವರಾಗುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ' ಎಂದು ಟಾಂಗ್ ನೀಡಿದ್ದಾರೆ.