ಸಿಎಂ ತವರಲ್ಲಿ ಲಂಚಾವತಾರ, ಲೋಕೋಪಯೋಗಿ ಇಲಾಖೆಯಲ್ಲಿ ಇದ್ದಾರೆ ಭ್ರಷ್ಟರು...!
- ಸಿಎಂ ಯಡಿಯೂರಪ್ಪ ತವರು ಶಿವಮೊಗ್ಗ ಜಿಲ್ಲೆಯಲ್ಲಿ ಮಿತಿಮೀರಿದ ಭ್ರಷ್ಟಾಚಾರ
- ಜಿಲ್ಲಾ ಉಸ್ತುವಾರಿ , ಕ್ಯಾಬಿನೆಟ್ ದರ್ಜೆಯ ಸಚಿವ ಕೆ ಎಸ್ ಈಶ್ವರಪ್ಪ ನವರಿಗೂ ಬಗ್ಗೊಲ್ಲ ಈ ಭ್ರಷ್ಟರು.!
- ಲಂಚದಾಸೆಗೆ ಭಿಕ್ಷುಕರಂತೆ ವರ್ತಿಸುವ ಲಂಚಬಾಕರು
ಶಿವಮೊಗ್ಗ (ಜು. 11): ಸಿಎಂ ಯಡಿಯೂರಪ್ಪ ತವರು ಶಿವಮೊಗ್ಗ ಜಿಲ್ಲೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಲೋಕೋಪಯೋಗಿ ಇಲಾಖೆಯ ಶಿವಮೊಗ್ಗ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರ ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರರಲ್ಲಿ 5% ಕಮಿಷನ್ ಕೇಳುತ್ತಾರೆ ವಿಭಾಗ ಅಧಿಕಾರಿ ಬೀರೇಂದ್ರ. ಲಂಚದ ಹಣ ಪಡೆದು ಮತ್ತಷ್ಟು ಲಂಚಕ್ಕೆ ಬೇಡಿಕೆ ಇಡುವ ಅಧಿಕಾರಿಯ ಲಂಚ ಬಾಕತನದ ವಿಡಿಯೋ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.