Asianet Suvarna News Asianet Suvarna News

ಶಿಕ್ಷಕರ ಪ್ರತಿಭಟನೆಗೆ ಮಣಿದ ಸರ್ಕಾರ; ಬೇಡಿಕೆ ಈಡೇರಿಕೆಗೆ ಬದ್ಧ ಎಂದ ಆರ್ ಅಶೋಕ್

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿಕ್ಷಕರು ಇಂದು ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ತರಕಾರಿ ಗಾಡಿಗಳನ್ನು ತಳ್ಳಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. 

First Published Dec 16, 2020, 3:10 PM IST | Last Updated Dec 16, 2020, 3:13 PM IST

ಬೆಂಗಳೂರು (ಡಿ. 16): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿಕ್ಷಕರು ಇಂದು ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ತರಕಾರಿ ಗಾಡಿಗಳನ್ನು ತಳ್ಳಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ. 

ಪ್ರತಿಭಟನೆಗೆ ಸ್ಪಂದಿಸಿರುವ ಸಚಿವ ಆರ್ ಅಶೋಕ್, ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದೆ.  ಸುರೇಶ್ ಕುಮಾರ್ ಜೊತೆಯೂ ಚರ್ಚೆ ನಡೆಸುತ್ತೇವೆ. ಮುಖ್ಯಮಂತ್ರಿಯವರ ಜೊತೆಯೂ ಚರ್ಚಿಸುತ್ತೇವೆ.  ಶಿಕ್ಷಕರ 6 ಬೇಡಿಕೆಗಳನ್ನು ಈಡೇರಿಸುವುದಕ್ಕೆ ನಾವು ಸಿದ್ಧರಿದ್ದೇವೆ. ಪ್ರತಿಭಟನೆಯನ್ನು ಕೈ ಬಿಡಿ' .ಎಂದು ಭರವಸೆ ನೀಡಿದ್ಧಾರೆ.