Asianet Suvarna News Asianet Suvarna News

ಸಿದ್ದು ಮೇಲೆ ಸೇಡಿಗೆ ರೈತರು ಬಲಿಪಶು! ಎಚ್‌ಡಿಕೆ ಹೇಳೋದೊಂದು, ಮಾಡೋದೊಂದು!

ಭೂ ಸುಧಾರಣೆ ಮಸೂದೆಗೆ ಜೆಡಿಎಸ್ ಬೆಂಬಲ‌ ವಿಚಾರವಾಗಿ  ಜೆಡಿಎಸ್ ವಿರುದ್ದ ಪ್ರಗತಿಪರ ಚಿಂತಕ, ಇತಿಹಾಸ ತಜ್ಞ ನಂಜರಾಜ್ ಅರಸ್ ಆಕ್ರೋಶ‌ ವ್ಯಕ್ತಪಡಿಸಿದ್ದಾರೆ. 

First Published Dec 9, 2020, 5:08 PM IST | Last Updated Dec 9, 2020, 5:10 PM IST

ಬೆಂಗಳೂರು (ಡಿ. 09): ಭೂ ಸುಧಾರಣೆ ಮಸೂದೆಗೆ ಜೆಡಿಎಸ್ ಬೆಂಬಲ‌ ವಿಚಾರವಾಗಿ  ಜೆಡಿಎಸ್ ವಿರುದ್ದ ಪ್ರಗತಿಪರ ಚಿಂತಕ, ಇತಿಹಾಸ ತಜ್ಞ ನಂಜರಾಜ್ ಅರಸ್ ಆಕ್ರೋಶ‌ ವ್ಯಕ್ತಪಡಿಸಿದ್ದಾರೆ. 

ಜೆಡಿಎಸ್ ಹೊರಗೆ ಬಾಯಲ್ಲಿ ಹೇಳೊದೊಂದು, ಆಂತರಿಕವಾಗಿ ಮಾಡೋದೆ ಒಂದು. ಹೊರಗೆ ರೈತರ ಪರ ಅಂದಿದ್ರು, ಆದರೆ ಪರಿಷತ್‌ನಲ್ಲಿ ಕಾಯ್ದೆ ಪರ ಮತ ಹಾಕಿದ್ದಾರೆ.  ಅವರು ಮತ ಹಾಕದಿದ್ರೆ ಬಿಲ್ ಪಾಸ್ ಆಗ್ತಿರಲಿಲ್ಲ, ಇನ್ನು 6 ತಿಂಗಳಲ್ಲಿ ಅದು ಬಿದ್ದು ಹೋಗ್ತಿತ್ತು. ಸಿದ್ದರಾಮಯ್ಯ ಮೇಲೆ ದ್ವೇಷ ಸಾಧಿಸಲು ಜೆಡಿಎಸ್ ಬಿಜೆಪಿ ಜೊತೆ ಕೈ ಜೋಡಿಸಿದೆ' ಎಂದು ನಂಜರಾಸ್ ಅರಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ರೈತ ಮುಖಂಡರ ವಿರುದ್ಧ ಎಚ್‌ಡಿಕೆ ಗರಂ ; ಬಹಿರಂಗ ಸವಾಲ್ ಹಾಕಿದ ಮಾಜಿ ಸಿಎಂ

'ದೇವೆಗೌಡರು ರೈತರ ಮಗ ಅಂತಾರೆ. ಅವರ ಮಾರ್ಗದರ್ಶನ, ಒಪ್ಪಿಗೆ ಇಲ್ಲದೆ ಬಿಜೆಪಿಗೆ ಬೆಂಬಲಿಸಲು ಸಾಧ್ಯವೇ ಇಲ್ಲ. ಸ್ವಾರ್ಥಕ್ಕಾಗಿ, ಸಿದ್ದರಾಮಯ್ಯರನ್ನ ತುಳಿಯಲು ಬಿಜೆಪಿ ಜೊತೆ ಕೈ ಜೋಡಿಸಿದ್ದಾರೆ. ಜೆಡಿಎಸ್‌ ಪಾಲಿಗೆ ಕಾಂಗ್ರೆಸ್‌ ಅಂದ್ರೆ ಸೋನಿಯಾಗಾಂಧಿ ಅಲ್ಲ, ಸಿದ್ದರಾಮಯ್ಯ' ಎಂದು ಪ್ರೊ. ನಂಜರಾಜೇ ಅರಸ್ ವಾಗ್ದಾಳಿ ನಡೆಸಿದ್ದಾರೆ.