Asianet Suvarna News Asianet Suvarna News

ಸರ್ಕಾರದ ದರ ಅನುಸರಿಸಬೇಕು; ಖಾಸಗಿ ಆಸ್ಪತ್ರೆಗಳಿಗೆ ಸಿಎಂ ಖಡಕ್ ಸೂಚನೆ

ಕೋವಿಡ್ 19 ಚಿಕಿತ್ಸೆಗಾಗಿ ಸರ್ಕಾರ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲು ನಿರ್ಧರಿಸಿದ್ದು, ಆಸ್ಪತ್ರೆಗಳ ವ್ಯವಸ್ಥಾಪಕರ ಜೊತೆ ಸಿಎಂ ಯಡಿಯೂರಪ್ಪ ಸಭೆ ನಡೆಸಿದ್ದಾರೆ. ' ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿದ್ದೇವೆ. ಸರ್ಕಾರ ನಿಗದಿಪಡಿಸಿರುವ ದರ ಅನುಸರಿಸಬೇಕು. ಖಾಸಗಿ ಆಸ್ಪತ್ರೆಗಳು 2500 ಬೆಡ್ ಕೊಡಲೇಬೇಕು. ರೋಗಿಗಳಿಗೆ ಬೆಡ್ ಸಿದ್ಧತೆ ಮಾಡಿಕೊಳ್ಳಿ' ಎಂದು ಸೂಚನೆ ನೀಡಿದ್ದಾರೆ. 

ಬೆಂಗಳೂರು (ಜೂ. 29): ಕೋವಿಡ್ 19 ಚಿಕಿತ್ಸೆಗಾಗಿ ಸರ್ಕಾರ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲು ನಿರ್ಧರಿಸಿದ್ದು, ಆಸ್ಪತ್ರೆಗಳ ವ್ಯವಸ್ಥಾಪಕರ ಜೊತೆ ಸಿಎಂ ಯಡಿಯೂರಪ್ಪ ಸಭೆ ನಡೆಸಿದ್ದಾರೆ. 
' ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿದ್ದೇವೆ. ಸರ್ಕಾರ ನಿಗದಿಪಡಿಸಿರುವ ದರ ಅನುಸರಿಸಬೇಕು. ಖಾಸಗಿ ಆಸ್ಪತ್ರೆಗಳು 2500 ಬೆಡ್ ಕೊಡಲೇಬೇಕು. ರೋಗಿಗಳಿಗೆ ಬೆಡ್ ಸಿದ್ಧತೆ ಮಾಡಿಕೊಳ್ಳಿ' ಎಂದು ಸೂಚನೆ ನೀಡಿದ್ದಾರೆ. 

ಖಾಸಗಿ ಆಸ್ಪತ್ರೆಗಳ ವ್ಯವಸ್ಥಾಪಕರ ಜೊತೆ ಸಿಎಂ ಸಭೆ; ಆರೋಗ್ಯ ಸಚಿವರು ಗೈರು

ಕೋವಿಡ್ 19 ಸೋಂಕಿತರ ಹೆಚ್ಚಾಗುತ್ತಿದ್ದು ಬೆಡ್‌ಗಳ ಕೊರತೆ ಕಂಡು ಬಂದಿದೆ. ಸೋಂಕಿತರಿಗೆ ಸರಿಯಾದ ಚಿಕಿತ್ಸೆ ಲಭ್ಯವಾಗುತ್ತಿಲ್ಲ ಎಂಬ ದೂರು ಕೇಳಿ ಬಂದಿದೆ. ಈ  ಹಿನ್ನಲೆಯಲ್ಲಿ ಸಿಎಂ ಸೂಚನೆ ಸೂಕ್ತವಾಗಿದೆ. ಇನ್ನಾದರೂ ಖಾಸಗಿ ಆಸ್ಪತ್ರೆಗಳು ಎಚ್ಚೆತ್ತುಕೊಳ್ಳಬೇಕಿದೆ.