Asianet Suvarna News Asianet Suvarna News
breaking news image

ಬಳ್ಳಾರಿ ವಿಭಜನೆ, ರಾಜಕೀಯ ನಾಯಕರಲ್ಲೇ ಪರ-ವಿರೋಧ

ಗಣಿನಾಡು ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ಜಿಲ್ಲೆ ಪ್ರತ್ಯೇಕ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್ ನಾಯಕರಲ್ಲೇ ಪರ ವಿರೋಧ ಚರ್ಚೆ ಶುರುವಾಗಿದೆ. 

ಬೆಂಗಳೂರು (ನ. 19): ಗಣಿನಾಡು ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ಜಿಲ್ಲೆ ಪ್ರತ್ಯೇಕ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್ ನಾಯಕರಲ್ಲೇ ಪರ ವಿರೋಧ ಚರ್ಚೆ ಶುರುವಾಗಿದೆ. ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ, ನಗರ ಬಿಜೆಪಿ ಶಾಸಕ ಸೋಮಶೇಖರ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ತಲೆಮರೆಸಿಕೊಂಡಿದ್ದ ಸಂಪತ್ ರಾಜ್ ಫೋನ್, ದುಡ್ಡಿಗಾಗಿ ಮಾಡಿದ ಟ್ರಿಕ್ಸ್ ಇದು!

ಹಂಪಿ ಮತ್ತು ತುಂಗಭದ್ರಾ ಜಲಾಶಯವಿಲ್ಲದೇ, ಬಳ್ಳಾರಿ ಜಿಲ್ಲೆಯನ್ನೂ ಊಹಿಸಲು ಸಾಧ್ಯವಿಲ್ಲ. ಜಿಲ್ಲೆ ಹೋಳಾದ್ರೆ, ಹಿಂದುಳಿದ ತಾಲೂಕುಗಳ ಅಭಿವೃದ್ಧಿ ಮರಿಚೀಕೆಯಾದಿತು.  ಬಳ್ಳಾರಿ ಜಿಲ್ಲೆಯ ವಿಭಜನೆಯಾದ್ರೂ ಮಾತನಾಡದ ಜಿಲ್ಲೆಯ ಹಿರಿಯ ಶಾಸಕರು, ಆಡಳಿತ ಪಕ್ಷದ ನಾಯಕರ ವಿರುದ್ಧವೂ ನಾಗೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಇತ್ತ ಹಿರಿಯ ಕಾಂಗ್ರೆಸ್ ಪರಿಷತ್ ಸದಸ್ಯರಾದ ಕೆಸಿ.ಕೊಂಡಯ್ಯ ಸ್ವಾಗತ ಮಾಡಿದ್ರೆ, ಅಲ್ಲಂ  ವೀರಭದ್ರಪ್ಪ ಸೌಹಾರ್ದತೆ ಮಂತ್ರ ಜಪಿಸಿದ್ದಾರೆ

Video Top Stories