Asianet Suvarna News Asianet Suvarna News
breaking news image

PSI ಅಭ್ಯರ್ಥಿಗಳ ಕಿವಿಗೆ ಬ್ಲೂ ಟೂತ್ ಇಟ್ಟು ಉತ್ತರ ಹೇಳಿ ಕೊಡ್ತಿದ್ದ ಆರ್‌ ಡಿ ಪಾಟೀಲ್

ಪಿಎಸ್‌ಐ ನೇಮಕಾತಿ ಪರೀಕ್ಷೆಯ (PSI Recruitment Scam) ಕರ್ಮಕಾಂಡ ಬಗೆದಷ್ಟೂ ಬಯಲಾಗುತ್ತಿದೆ. ಈ ಅಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಆರ್ ಡಿ ಪಾಟೀಲ್ (RD Patil) ಸೂತ್ರಧಾರ ಎನ್ನಲಾಗುತ್ತಿದೆ. ಈತ ಅಕ್ರಮ ಎಸಗುತ್ತಿದ್ದ ರೀತಿ ಕೇಳಿದ್ರೆ ಎಂಥಾ ಕಿಲಾಡಿ ಎಂದು ಗೊತ್ತಾಗುತ್ತದೆ. 

ಬೆಂಗಳೂರು (ಏ. 23): ಪಿಎಸ್‌ಐ ನೇಮಕಾತಿ ಪರೀಕ್ಷೆಯ (PSI Recruitment Scam) ಕರ್ಮಕಾಂಡ ಬಗೆದಷ್ಟೂ ಬಯಲಾಗುತ್ತಿದೆ. ಈ ಅಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಆರ್ ಡಿ ಪಾಟೀಲ್ (RD Patil) ಸೂತ್ರಧಾರ ಎನ್ನಲಾಗುತ್ತಿದೆ. ಈತ ಅಕ್ರಮ ಎಸಗುತ್ತಿದ್ದ ರೀತಿ ಕೇಳಿದ್ರೆ ಎಂಥಾ ಕಿಲಾಡಿ ಎಂದು ಗೊತ್ತಾಗುತ್ತದೆ.

PSI Recruitment Scam ಆಡಿಯೋ ಬಗ್ಗೆಯೂ ತನಿಖೆಯಾಗಲಿದೆ ಎಂದ ಸಿಎಂ

ಅಭ್ಯರ್ಥಿಗಳ ಕಿವಿಗೆ ಬ್ಲೂ ಟೂತ್ ಇಟ್ಟು ಉತ್ತರ ಹೇಳಿ ಕೊಡುತ್ತಿದ್ದ. ಈತ 2010-15 ರವರೆಗೆ ಅಫ್ಜಲ್‌ಪುರ ಗ್ರಾಮ ಪಂಚಾಯತ್ ಅಧ್ಯಕ್ಷನಾಗಿದ್ದ. ಅಲ್ಲಿಯೂ 5 ಕೋಟಿ ರೂ ಅವ್ಯವಹಾರ ಮಾಡಿದ್ದ ಎನ್ನಲಾಗಿದೆ. ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

 

Video Top Stories