ಶಾಲೆ ಆರಂಭಿಸಲು ಸರ್ಕಾರ ಸಿದ್ಧ: ಒಂದೇ ತಿಂಗಳಲ್ಲಿ ಬದಲಾಯ್ತು ಪೋಷಕರ ಅಭಿಪ್ರಾಯ!
ಕೋವಿಡ್ ಭೀತಿಯಿಂದಾಗಿ ಕಳೆದ ಹತ್ತು ತಿಂಗಳಿನಿಂದ ಬಂದ್ ಆಗಿದ್ದ ಶಾಲೆಗಳು ಮತ್ತು ಪಿಯು ಕಾಲೇಜುಗಳನ್ನು 2021ರ ಜ.1ರಿಂದ ಪುನಾರಂಭಿಸುವ ಅಧಿಕೃತ ಘೋಷಣೆಯನ್ನು ರಾಜ್ಯ ಸರ್ಕಾರ ಮಾಡಿದೆ. ಮೊದಲ ಹಂತದಲ್ಲಿ 10 ಮತ್ತು 12ನೇ ತರಗತಿ ಮಕ್ಕಳಿಗೆ ತರಗತಿಗಳಲ್ಲಿ ಬೋಧನೆ ಆರಂಭವಾಗಲಿದೆ.
ಬೆಂಗಳೂರು(ಡಿ.20) ಕೋವಿಡ್ ಭೀತಿಯಿಂದಾಗಿ ಕಳೆದ ಹತ್ತು ತಿಂಗಳಿನಿಂದ ಬಂದ್ ಆಗಿದ್ದ ಶಾಲೆಗಳು ಮತ್ತು ಪಿಯು ಕಾಲೇಜುಗಳನ್ನು 2021ರ ಜ.1ರಿಂದ ಪುನಾರಂಭಿಸುವ ಅಧಿಕೃತ ಘೋಷಣೆಯನ್ನು ರಾಜ್ಯ ಸರ್ಕಾರ ಮಾಡಿದೆ. ಮೊದಲ ಹಂತದಲ್ಲಿ 10 ಮತ್ತು 12ನೇ ತರಗತಿ ಮಕ್ಕಳಿಗೆ ತರಗತಿಗಳಲ್ಲಿ ಬೋಧನೆ ಆರಂಭವಾಗಲಿದೆ.
ಇದೇ ವೇಳೆ 1ರಿಂದ 9ನೇ ತರಗತಿ ಬದಲು 6ರಿಂದ 9ನೇ ತರಗತಿವರೆಗಿನ ಮಕ್ಕಳಿಗೆ ಮಾತ್ರ ಶಾಲಾ ಆವರಣ/ ಕೊಠಡಿಯಲ್ಲಿ ಜ.1ರಿಂದ ‘ವಿದ್ಯಾಗಮ’ ಕಾರ್ಯಕ್ರಮ ಆರಂಭಿಸಲು ನಿರ್ಧರಿಸಿದೆ. ಪರಿಸ್ಥಿತಿ ನೋಡಿಕೊಂಡು ಜ.15ರ ಬಳಿಕ 1ರಿಂದ 5ನೇ ತರಗತಿ ಮಕ್ಕಳಿಗೆ ವಿದ್ಯಾಗಮ ಮತ್ತು ಪ್ರಥಮ ಪಿಯುಸಿ ಮಕ್ಕಳಿಗೆ ತರಗತಿ ಹಾಜರಾತಿ ವಿಸ್ತರಿಸಲು ತೀರ್ಮಾನಿಸಲಾಗಿದೆ.