Asianet Suvarna News Asianet Suvarna News

ಸಿಂಗನಾಯಕನ ಹಳ್ಳಿ ಕೆರೆ ಉಳಿಸಲು NBF ಅಭಿಯಾನ; 6313 ಮರಗಳನ್ನು ಕಡಿಯಲು ವಿರೋಧ

ಯಲಹಂಕ ಬಳಿಕ ಸಿಂಗನಾಯಕನ ಹಳ್ಳಿ ಕೆರೆಯ ಪುನರುಜ್ಜೀವನಕ್ಕೆ ಇಲ್ಲಿರುವ 6313 ಮರಗಳನ್ನು ಕಡಿಯಲು ಸರ್ಕಾರ ಮುಂದಾಗಿದೆ. ಈ ನಡೆಗೆ ಎನ್‌ಬಿಎಫ್ ವಿರೋಧ ವ್ಯಕ್ತಪಡಿಸಿದೆ. 

ಬೆಂಗಳೂರು (ಜೂ. 21): ಯಲಹಂಕ ಬಳಿಕ ಸಿಂಗನಾಯಕನ ಹಳ್ಳಿ ಕೆರೆ ಉಳಿಸಲು ನಮ್ಮ ಬೆಂಗಳೂರು ಪ್ರತಿಷ್ಠಾನ ಮುಂದಾಗಿದೆ. ಇಲ್ಲಿನ ಕೆರೆಯ ಪುನರುಜ್ಜೀವನಕ್ಕೆ ಇಲ್ಲಿರುವ 6313 ಮರಗಳನ್ನು ಕಡಿಯಲು ಸರ್ಕಾರ ಮುಂದಾಗಿದೆ.

ಲಾಕ್‌ಡೌನ್ ಸಂಕಷ್ಟ: NBF ವತಿಯಿಂದ 600 ಕುಟುಂಬಗಳಿಗೆ ಆಹಾರ, ಮೆಡಿಕಲ್ ಕಿಟ್ ವಿತರಣೆ

ಮರಗಳನ್ನು ಕಡಿಯುವ ಬಗ್ಗೆ ಸರ್ಕಾರ ಮರುಚಿಂತನೆ ನಡೆಸಬೇಕೆಂದು ಎನ್‌ಬಿಎಫ್ ಒತ್ತಾಯಿಸಿದೆ. ಮರಗಳನ್ನು ಕಡಿಯುವುದಕ್ಕೆ ವಿರೋಧ ವ್ಯಕ್ತಪಡಿಸಿದೆ. ವನ್ಯಜೀವಿಗಳ ಆವಾಸ ಸ್ಥಾನವಾಗಿರುವ ಈ ಕಾಡನ್ನು ನಾಶಪಡಿಸುವುದು ಸರಿಯಲ್ಲ ಎಂದು ಎನ್‌ಬಿಎಫ್ ಅಭಿಯಾನಕ್ಕೆ ಮುಂದಾಗಿದೆ.