ಡಾ. ವಿಷ್ಣು ಪ್ರತಿಮೆ ಧ್ವಂಸಕ್ಕೆ ಟ್ವಿಸ್ಟ್!ಸಚಿವ ಸೋಮಣ್ಣ ಹೊಸ ರಾಗ

ವಿಷ್ಣುವರ್ಧನ್ ಪುಣ್ಯ ಸ್ಮರಣೆಗೆ 4 ದಿನ ಇರುವಾಗಲೇ   ಕಿಡಿಗೇಡಿಗಳು ಪ್ರತಿಮೆಯನ್ನು ಒಡೆದು ಹಾಕಿದ್ದಾರೆ. ಇದರಿಂದ ವಿಷ್ಣು ಅಭಿಮಾನಿಗಳು ಆಕ್ರೋಶಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳದಲ್ಲೇ ಪ್ರತಿಮೆ ಸ್ಥಾಪನೆಗೆ ಸಂಘಟನೆಗಳು ಒತ್ತಾಯಿಸಿವೆ. 

First Published Dec 26, 2020, 1:32 PM IST | Last Updated Dec 26, 2020, 2:18 PM IST

ಬೆಂಗಳೂರು (ಡಿ. 26): ವಿಷ್ಣುವರ್ಧನ್ ಪುಣ್ಯ ಸ್ಮರಣೆಗೆ 4 ದಿನ ಇರುವಾಗಲೇ   ಕಿಡಿಗೇಡಿಗಳು ಪ್ರತಿಮೆಯನ್ನು ಒಡೆದು ಹಾಕಿದ್ದಾರೆ. ಇದರಿಂದ ವಿಷ್ಣು ಅಭಿಮಾನಿಗಳು ಆಕ್ರೋಶಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳದಲ್ಲೇ ಪ್ರತಿಮೆ ಸ್ಥಾಪನೆಗೆ ಸಂಘಟನೆಗಳು ಒತ್ತಾಯಿಸಿವೆ. 

ವಿಷ್ಣುವರ್ಧನ್ ಪ್ರತಿಮೆ ಧ್ವಂಸವೋ, ಸ್ಥಳಾಂತರವೋ ಎಂಬ ಗೊಂದಲಕ್ಕೆ ಸಚಿವ ಸೋಮಣ್ಣ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಧ್ವಂಸನೂ ಮಾಡಿಲ್ಲ, ಏನೂ ಮಾಡಿಲ್ಲ. ಇದು ಸ್ಥಳಾಂತರವಷ್ಟೇ ಎಂದು ಹೇಳಿದ್ದಾರೆ.