Asianet Suvarna News Asianet Suvarna News

PSI Recruitment Scam ಪಿಎಸ್‌ಐ ಮಾತ್ರವಲ್ಲ ಬೇರೆ ಪರೀಕ್ಷೆಗಳಲ್ಲೂ ಗೋಲ್ ಮಾಲ್!

ಕಲಬುರಗಿ ಮೂಲದ ಇಂಜಿನಿಯರ್ ಮಂಜುನಾಥ್ ಮನೆ ಮೇಲೆ ಸಿಐಡಿ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಪಿಎಸ್‌ಐ ಮಾತ್ರವಲ್ಲದೆ ಬೇರೆ ಪರೀಕ್ಷೆಗಳಲ್ಲೂ ಗೋಲ್  ಮಾಲ್ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.

ಬೆಂಗಳೂರು (ಏ.23): 545 ಪಿಎಸ್‌ಐ ನೇಮಕಾತಿ (PSI Recruitment) ಪರೀಕ್ಷೆಯಲ್ಲಿ ಬಗೆದಷ್ಟು ಅಕ್ರಮ ಬಯಲಾಗುತ್ತಿದೆ. ಪಿಎಸ್‌ಐ ಮಾತ್ರವಲ್ಲದೆ ಬೇರೆ ಪರೀಕ್ಷೆಗಳಲ್ಲೂ ಗೋಲ್  ಮಾಲ್ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಕಲಬುರಗಿ (Kalaburagi) ಮೂಲದ ಇಂಜಿನಿಯರ್ ಮಂಜುನಾಥ್ ಮನೆ ಮೇಲೆ ಸಿಐಡಿ (CID) ಪೊಲೀಸರು ದಾಳಿ ನಡೆಸಿದ್ದು, ಕೆಪಿಎಸ್‌ಸಿ ನೇಮಕಾತಿಗೆ (KPSC  Recruitment) ಸಂಬಂಧಿಸಿದ ಕೆಲವು ಅಭ್ಯರ್ಥಿಗಳ ಹಾಲ್ ಟಿಕೆಟ್‌ಗಳು ಲಭ್ಯವಾಗಿವೆ.

ಬಿಜೆಪಿ ಸರ್ಕಾರದ ವಿರುದ್ಧ ಹೊಸ ಬಾಂಬ್ ಸಿಡಿಸಿದ ಕುಮಾರಸ್ವಾಮಿ..!

 ಸರಕಾರಿ ನೌಕರಿಯಲ್ಲಿ ಇರುವ ಹಲವರ ಹಾಲ್ ಟಿಕೆಟ್ ಪತ್ತೆಯಾಗಿದ್ದು, ಒಟ್ಟು 11 ಹಾಲ್ ಟಿಕೆಟ್ ಸಿಐಡಿಗೆ ಸಿಕ್ಕಿದೆ ಎಂದು ತಿಳಿದುಬಂದಿದೆ.   ಸದ್ಯಕ್ಕೆ ಮಂಜುನಾಥ್ ತಲೆ ಮರೆಸಿಕೊಂಡಿದ್ದಾನೆ. ಇನ್ನು ಇದೇ ಮಂಜುನಾಥ್ ಪಿಎಸ್‌ಐ ನೇಮಕಾತಿಗೆ ವಿದೇಶ್ ಬಳಿ ಹಣ ಪಡೆದಿರುವುದು ಬಹಿರಂಗವಾಗಿದೆ. ಉತ್ತೀರ್ಣರನ್ನಾಗಿ ಮಾಡಲು 36 ಲಕ್ಷ ಪಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. 

Video Top Stories