Bengaluru: ಹಿಜಾಬ್ ವಿವಾದವಲ್ಲ, ಶಿಕ್ಷಕಿಯ ಮಾತನ್ನು ತಪ್ಪಾಗಿ ತಿಳಿದುಕೊಂಡರು, DDPI ಸ್ಪಷ್ಟನೆ
'ಇದು ಹಿಜಾಬ್ ವಿವಾದ ಅಲ್ಲ, ಶಿಕ್ಷಕಿ ಬೋರ್ಡ್ ಮೇಲೆ KLS ಎಂದು ಬರೆದಿದ್ದೇ ತಪ್ಪಾಯ್ತು. ಆದರೆ ಅದು ಅವಾಚ್ಯ ಶಬ್ದ ಎಂದು ಭಾವಿಸಿ, ಮಕ್ಕಳು ಪೋಷಕರಲ್ಲಿ ದೂರಿದ್ಧಾರೆ' ಎಂದು ಡಿಡಿಪಿಐ ಸ್ಪಷ್ಟನೆ ನೀಡಿದ್ಧಾರೆ.
ಬೆಂಗಳೂರು (ಫೆ. 12): ಅನಗತ್ಯ ವಿವಾದಕ್ಕೆ ಕಾರಣರಾದ ಚಂದ್ರಾಲೇಔಟ್ ವಿದ್ಯಾಸಾಗರ್ ಶಾಲೆ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.
' ಇದು ಹಿಜಾಬ್ ವಿಚಾರಕ್ಕಲ್ಲ. ಗಲಾಟೆ ಮಾಡುತ್ತಿದ್ದ ಮಕ್ಕಳಿಗೆ ಶಿಕ್ಷಕಿ ಹಿತವಚನ ಹೇಳಿದರು. ಗಲಾಟೆ ಮಾಡುತ್ತಿದ್ದ ಮಕ್ಕಳ ಇನಿಶಿಯಲ್‌ನ್ನು KLS ಅಂತ ಬರೆದಿದ್ಧಾರೆ. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಮಕ್ಕಳು ಪೋಷಕರಿಗೆ ದೂರಿದ್ಧಾರೆ. ಅನಗತ್ಯ ವಿವಾದ ಸೃಷ್ಟಿಸಿದ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ' ಎಂದು ಶಾಲೆಯ ಪ್ರಿನ್ಸಿಪಾಲ್ ಸ್ಪಷ್ಟನೆ ನೀಡಿದ್ದಾರೆ.
Hijab Row:ತರಗತಿಯಲ್ಲಿ ಗೊಂದಲ, ಅನಗತ್ಯ ವಿವಾದ ಸೃಷ್ಟಿಸಿದ ಶಿಕ್ಷಕಿ ಅಮಾನತು
'ಇದು ಹಿಜಾಬ್ ವಿವಾದ ಅಲ್ಲ, ಶಿಕ್ಷಕಿ ಬೋರ್ಡ್ ಮೇಲೆ KLS ಎಂದು ಬರೆದಿದ್ದೇ ತಪ್ಪಾಯ್ತು. ಆದರೆ ಅದು ಅವಾಚ್ಯ ಶಬ್ದ ಎಂದು ಭಾವಿಸಿ, ಮಕ್ಕಳು ಪೋಷಕರಲ್ಲಿ ದೂರಿದ್ಧಾರೆ' ಎಂದು ಡಿಡಿಪಿಐ ಸ್ಪಷ್ಟನೆ ನೀಡಿದ್ಧಾರೆ.