ಉಲ್ಟಾ ಹೊಡೆದ ಬಿಜೆಪಿ ಬಂಡಾಯ ಶಾಸಕರು..!
ನನ್ನ ಸಹೋದರ ಉಮೇಶ್ ಕತ್ತಿ ವಜ್ರವಿದ್ದಂತೆ. ನನಗೆ ಎಂಪಿ ಟಿಕೆಟ್ ತಪ್ಪಿಸಿದ್ದೇಕೆ ಎಂದು ಹೇಳಲಿಲ್ಲ. ಬೆಳಗಾವಿಯಲ್ಲಿ ಮುಖ್ಯಮಂತ್ರಿಗಳು ಕೊಟ್ಟ ಭರವಸೆಯಂತೆ ನನ್ನನ್ನು ರಾಜ್ಯಸಭೆಗೆ ಕಳಿಸಲಿ ಎಂದು ರಮೇಶ್ ಕತ್ತಿ ಹೇಳಿದ್ದಾರೆ.
ಬೆಂಗಳೂರು(ಮೇ.30): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಅಮಿತ್ ಶಾ ಕರೆ ಮಾಡಿದ ಬೆನ್ನಲ್ಲೇ ಬಿಜೆಪಿ ಬಂಡಾಯ ಶಾಸಕರು ಉಲ್ಟಾ ಹೊಡೆದಿದ್ದು, ಹೊಸ ರಾಗ ತೆಗೆದಿದ್ದಾರೆ.
ಉತ್ತರ ಕರ್ನಾಟಕದ ಶಾಸಕರು ಊಟಕ್ಕಾಗಿ ಬಂದಿದ್ದರು ಅಷ್ಟೇ, ಬಿಜೆಪಿಯಲ್ಲಿ ಯಾವುದೇ ಅಸಮಾಧಾನವಿಲ್ಲ ಎಂದು ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಸ್ಪಷ್ಟನೆ ನೀಡಿದ್ದಾರೆ.ನನ್ನ ಸಹೋದರ ಉಮೇಶ್ ಕತ್ತಿ ವಜ್ರವಿದ್ದಂತೆ. ನನಗೆ ಎಂಪಿ ಟಿಕೆಟ್ ತಪ್ಪಿಸಿದ್ದೇಕೆ ಎಂದು ಹೇಳಲಿಲ್ಲ. ಬೆಳಗಾವಿಯಲ್ಲಿ ಮುಖ್ಯಮಂತ್ರಿಗಳು ಕೊಟ್ಟ ಭರವಸೆಯಂತೆ ನನ್ನನ್ನು ರಾಜ್ಯಸಭೆಗೆ ಕಳಿಸಲಿ ಎಂದು ರಮೇಶ್ ಕತ್ತಿ ಹೇಳಿದ್ದಾರೆ.
BJP ಅಸಮಾಧಾನ: ಯಡಿಯೂರಪ್ಪ ಮುಂದಿರುವ ದಾರಿಗಳೇನು?
ಜೆಡಿಎಸ್ ಪಕ್ಷದಲ್ಲಿದ್ದ ಉಮೇಶ್ ಕತ್ತಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಪಕ್ಷ ಸೇರಿದ ಮೊದಲ ಶಾಸಕ ಎನ್ನುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈ ಕಾರಣಕ್ಕಾಗಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಸಚಿವ ಸ್ಥಾನವನ್ನು ಕಳೆದುಕೊಂಡಿದ್ದರು.