ರಾಶಿ ರಾಶಿ ಬೆಂಡೇಕಾಯಿ ಹಸುಗಳ ಪಾಲು, ನಮ್ಮ ಕಷ್ಟ ಯಾರಿಗೆ ಹೇಳೋನ್ರಿ? ರೈತ ಮಹಿಳೆಯ ಕಣ್ಣೀರು
ಕೊರೊನಾ ಲಾಕ್‌ಡೌನ್‌ನಿಂದ ರೈತರ ಬೆಳೆಯನ್ನು ಕೇಳುವವರೇ ಇಲ್ಲದಂತಾಗಿದೆ. ಅಫ್ಜಲಪುರ ತಾಲ್ಲೂಕು ಬಳ್ಳೂರಗಿ ಗ್ರಾಮದ ಗಂಗೂಬಾಯಿ ಎನ್ನುವವರು 1 ಎಕರೆಯಲ್ಲಿ ಬೆಳೆದ ಬೆಂಡೆಕಾಯಿ ದನಗಳ ಪಾಲಾಗಿದೆ.
ಬೆಂಗಳೂರು (ಮೇ. 26): ಕೊರೊನಾ ಲಾಕ್‌ಡೌನ್‌ನಿಂದ ರೈತರ ಬೆಳೆಯನ್ನು ಕೇಳುವವರೇ ಇಲ್ಲದಂತಾಗಿದೆ. ಅಫ್ಜಲಪುರ ತಾಲ್ಲೂಕು ಬಳ್ಳೂರಗಿ ಗ್ರಾಮದ ಗಂಗೂಬಾಯಿ ಎನ್ನುವವರು 1 ಎಕರೆಯಲ್ಲಿ ಬೆಳೆದ ಬೆಂಡೆಕಾಯಿ ದನಗಳ ಪಾಲಾಗಿದೆ. 'ನೀವು ರಾಜ್ಯವನ್ನು ಲಾಕ್‌ಡೌನ್ ಮಾಡಿದ್ದೀರಾ, ನಾವು ನಮ್ಮ ಬೆಳೆಯನ್ನು ಎಲ್ಲಿ ಮಾರೋಣ.? ನಾವು ಮನೆಯಲ್ಲಿ 10 ಮಂದಿ ಇದ್ದೇವೆ. ನಾವೇನು ಊಟ ಮಾಡೋಣ..? ಎಂದು ರೈತ ಮಹಿಳೆ ಕಣ್ಣೀರಿಟ್ಟಿದ್ದಾರೆ.