Asianet Suvarna News Asianet Suvarna News

Omicron Variant: ರಾಜ್ಯದಲ್ಲಿ ಲಾಕ್‌ಡೌನ್ ಬಗ್ಗೆ ಆರೋಗ್ಯ ಸಚಿವರ ಸ್ಪಷ್ಟನೆ

ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಎಲ್ಲ ರೀತಿ ಕಟ್ಟೆಚ್ಚರ ವಹಿಸಲಾಗಿದೆ. ಒಮಿಕ್ರಾನ್‌ನ (Omricron) ಭೀತಿ ಕಾಡುತ್ತಿದೆ. ಮತ್ತೆ ಲಾಕ್‌ಡೌನ್ (Lockdown) ಆಗುತ್ತಾ ಎಂಬ ಪ್ರಶ್ನೆಯೂ ಸಹಜವಾಗಿ ಎದುರಾಗಿದೆ. 

ಬೆಂಗಳೂರು (ನ. 29): ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಎಲ್ಲ ರೀತಿ ಕಟ್ಟೆಚ್ಚರ ವಹಿಸಲಾಗಿದೆ. ಒಮಿಕ್ರಾನ್‌ನ (Omricron) ಭೀತಿ ಕಾಡುತ್ತಿದೆ. ಮತ್ತೆ ಲಾಕ್‌ಡೌನ್ (Lockdown) ಆಗುತ್ತಾ ಎಂಬ ಪ್ರಶ್ನೆಯೂ ಸಹಜವಾಗಿ ಎದುರಾಗಿದೆ. 

Omicron Variant: ಆಫ್ರಿಕಾದಿಂದ ಬಂದ ಇಬ್ಬರಲ್ಲೂ 'ಡೆಲ್ಟಾ' ವೈರಸ್: 'ಒಮಿಕ್ರೋನ್' ಅಲ್ಲ

'ಸರ್ಕಾರದ ಮುಂದೆ ಲಾಕ್‌ಡೌನ್‌ ಪ್ರಸ್ತಾವನೆಯಿಲ್ಲ. ಲಾಕ್‌ಡೌನ್ ಬಗ್ಗೆ ವದಂತಿ ಹಬ್ಬಿಸಿದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಲಾಕ್‌ಡೌನ್‌ನಿಂದ ಜನ ಸಾಕಷ್ಟು ನಷ್ಟ ಅನುಭವಿಸಿದ್ದಾರೆ, ಕಷ್ಟಗಳನ್ನು ಅನುಭವಿಸಿದ್ದಾರೆ. ಹಾಗಾಗಿ ಪದೇ ಪದೇ ಲಾಕ್‌ಡೌನ್ ಬಗ್ಗೆ ಗೊಂದಲಮಯವಾದ ಸುದ್ದಿಗಳನ್ನು ಹರಡೋದು ಸರಿಯಲ್ಲ. ಜವಾಬ್ದಾರಿಯಿಂದ ವರ್ತಿಸೋಣ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಎಚ್ಚರಿಸಿದ್ದಾರೆ.  ನಾಳೆ ಆರೋಗ್ಯ ಅಧಿಕಾರಿಗಳ ಜೊತೆ ಡಾ. ಸುಧಾಕರ್ ಮಹತ್ವದ ಸಭೆ ನಡೆಸಲಿದ್ದಾರೆ.