Asianet Suvarna News Asianet Suvarna News

ಕೇರಳದಲ್ಲಿ 'ನಿಪಾ ಹಾವಳಿ'; ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಿದ ಜಿಲ್ಲಾಡಳಿತ

ಕೋವಿಡ್‌ ಅಲೆ ನಿಯಂತ್ರಿಸಲಾಗದೆ ಹೆಣಗಾಡುತ್ತಿರುವ ಕೇರಳದಲ್ಲಿ ಈಗ ‘ನಿಪಾ ವೈರ​ಸ್‌’ ಹಾವಳಿ ಆರಂಭ​ವಾ​ಗಿದೆ. 12 ವರ್ಷದ ಬಾಲಕನೊಬ್ಬ ನಿಪಾ ವೈರಸ್‌ ಸೋಂಕಿಗೆ ಬಲಿಯಾಗಿದ್ದು, ಆತನಿಗೆ ಚಿಕಿತ್ಸೆ ನೀಡಿ​ದ್ದ ಇಬ್ಬರು ವೈದ್ಯ​ರಿಗೂ ಸೋಂಕು ತಾಗಿ​ದೆ.

ಮಂಗಳೂರು (ಸೆ. 07): ಕೋವಿಡ್‌ ಅಲೆ ನಿಯಂತ್ರಿಸಲಾಗದೆ ಹೆಣಗಾಡುತ್ತಿರುವ ಕೇರಳದಲ್ಲಿ ಈಗ ‘ನಿಪಾ ವೈರ​ಸ್‌’ ಹಾವಳಿ ಆರಂಭ​ವಾ​ಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಫಾ ಅಲರ್ಟ್ ಘೋಷಿಸಿದೆ ಜಿಲ್ಲಾಡಳಿತ. ಕಟ್ಟೆಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ. 

ದೆಹಲಿಗೆ ತೆರಳುವ ಮುನ್ನವೇ ಸಚಿವಾಕಾಂಕ್ಷಿಗಳಿಗೆ ಶಾಕ್ ಕೊಟ್ಟ ಸಿಎಂ ಬೊಮ್ಮಾಯಿ!

ಕೇರಳದಲ್ಲಿ 12 ವರ್ಷದ ಬಾಲಕನೊಬ್ಬ ನಿಪಾ ವೈರಸ್‌ ಸೋಂಕಿಗೆ ಬಲಿಯಾಗಿದ್ದು, ಆತನಿಗೆ ಚಿಕಿತ್ಸೆ ನೀಡಿ​ದ್ದ ಇಬ್ಬರು ವೈದ್ಯ​ರಿಗೂ ಸೋಂಕು ತಾಗಿ​ದೆ. ಹೀಗಾಗಿ ರಾಜ್ಯದಲ್ಲಿ ಹೈಅಲರ್ಟ್‌ ಘೋಷಿಸಲಾಗಿದೆ. ಸೋಂಕಿಗೀಡಾದ ಬಾವಲಿಗಳು ತಿಂದು ಬಿಟ್ಟಹಣ್ಣನ್ನು ಅನ್ಯ ಪ್ರಾಣಿ ಅಥವಾ ಮನುಷ್ಯರು ಸೇವಿಸಿದಾಗ ನಿಪಾ ವೈರಸ್‌ ಅಂಟುತ್ತದೆ. ಜೊಲ್ಲು, ಉಗುಳಿನ ಮೂಲಕ ಇತರರಿಗೆ ಹರಡುತ್ತದೆ.

Video Top Stories