Asianet Suvarna News Asianet Suvarna News

News Hour: ರಾಜ್ಯಕ್ಕೆ ಬಂತು ಭಾರತ್ ಜೋಡೋ ಯಾತ್ರೆ, ಅಂದು ಅಪ್ಪುಗೆ, ಇಂದು ಒಟ್ಟೊಟ್ಟಿಗೆ ನಗಾರಿ!

ಕಾಂಗ್ರೆಸ್‌ನ ಭಾರತ್‌ ಜೋಡೋ ಯಾತ್ರೆ ಕರ್ನಾಟಕಕ್ಕೆ ಗ್ರ್ಯಾಂಡ್‌ ಎಂಟ್ರಿ ಪಡೆದುಕೊಂಡಿದೆ. ಕೇರಳದಿಂದ ಸುಲ್ತಾನ್‌ ಬತೇರಿ ಮಾರ್ಗವಾಗಿ ಕರ್ನಾಟಕಕ್ಕೆ ಯಾತ್ರೆ ಪ್ರವೇಶಿಸಿದೆ. ಕಕ್ಕೇನಹಳ್ಳಿ ಚೆಕ್‌ಪೋಸ್ಟ್‌ನಿಂದ ರಾಹುಲ್ ಗಾಂಧಿ ಕರ್ನಾಟಕಕ್ಕೆ ಎಂಟ್ರಿ ಪಡೆದಿದ್ದಾರೆ.

ಬೆಂಗಳೂರು (ಸೆ.30): ರಾಜ್ಯದಲ್ಲಿ 510 ಕಿಲೋಮೀಟರ್‌ ಸಂಚಾರ ಮಾಡಲಿರುವ ಕಾಂಗ್ರೆಸ್‌ ಪಕ್ಷದ ಭಾರತ್‌ ಜೋಡೋ ಯಾತ್ರೆ ಇಂದು ಕೇರಳದಿಂದ ಕರ್ನಾಟಕಕ್ಕೆ ಪ್ರವೇಶ ಪಡೆಯಿತು. ಕಕ್ಕೇನಹಳ್ಳಿ ಚೆಕ್‌ಪೋಸ್ಟ್‌ನಿಂದ ರಾಹುಲ್‌ ಗಾಂಧಿ ಕರ್ನಾಟಕಕ್ಕೆ ಪ್ರವೇಶ ಪಡೆದರು. ಡಿಕೆ ಶಿವಕುಮಾರ್‌ಗೂ ಮುನ್ನವೇ ರಾಹುಲ್‌ ಗಾಂಧಿಯವರನ್ನು ಸಿದ್ಧರಾಮಯ್ಯ ಬಣ ಕರ್ನಾಟಕಕ್ಕೆ ಸ್ವಾಗತಿಸಿತು.  ಬಂಡೀಪುರ ಅರಣ್ಯ ಪ್ರದೇಶದ ಮಧ್ಯೆಯೇ ರಾಹುಲ್‌ ಗಾಂಧಿಗೆ ಸ್ವಾಗತ ನೀಡಲಾಯಿತು. ಗುಂಡ್ಲುಪೇಟೆಯಿಂದ 27 ಕಿಮೀ ದೂರದಲ್ಲಿ ಕಕ್ಕೇನಹಳ್ಳಿ ಗಡಿ ಇದೆ. ಈ ಬಾರ್ಡರ್‌ನಲ್ಲಿ ಸಿದ್ಧರಾಮಯ್ಯ ಬಣದಿಂದ ಮಾತ್ರ ಸ್ವಾಗತ ಸಿಕ್ಕಿದೆ.

ಸಿದ್ದರಾಮಯ್ಯ (Siddaramaiah), ಎಚ್‌ಸಿ ಮಹದೇವಪ್ಪ,ಕೆಜೆ ಜಾರ್ಜ್,  ಎಂ. ಬಿ ಪಾಟೀಲ್, ಪ್ರಕಾಶ್ ರಾಥೋಡ್ ಅವರು ರಾಹುಲ್‌ ಗಾಂಧಿಯನ್ನು ಸ್ವಾಗತಿಸಿತು. ಇನ್ನೊಂದೆಡೆ ಡಿಕೆ ಶಿವಕುಮಾರ್‌ (D K Shivakumar) ಗುಂಡ್ಲುಪೇಟೆ ಸ್ವಾಗತ ವೇದಿಕೆಯಲ್ಲಿಯೇ ಉಳಿದುಕೊಂಡಿದ್ದರು. ಬೆಳಗ್ಗೆ 9.30ರ ವೇಳೆಗೆ ರಾಹುಲ್‌ ಗಾಂಧಿ ಕರ್ನಾಟಕಕ್ಕೆ ಆಗಮಿಸಿದರು.

News Hour: ಪೇಸಿಎಂ ಅಸ್ತ್ರಕ್ಕೆ ಬಿಜೆಪಿ ನಾಯಕರ ಜಾತಿ ಪ್ರತ್ಯಸ್ತ್ರ!

 

ಅಂಬೇಡ್ಕರ್ ಭವನ ಬಳಿ ಬಹಿರಂಗ ಸಮಾವೇಶದಲ್ಲೂ ರಾಹುಲ್‌ ಗಾಂಧಿ (Rahul Gandhi) ಭಾಗಿಯಾದರು. ನಗಾರಿ ಬಾರಿಸಿ ಕಾರ್ಯಕ್ರಮಕ್ಕೆ ರಾಹುಲ್ ಚಾಲನೆ ನೀಡಿದರು, ಡಿಕೆಶಿ, ಸಿದ್ದು ಕೈ ಹಿಡಿದು ರಾಹುಲ್‌ ಗಾಂಧಿ ನಗಾರಿ ಬಾರಿಸಿದ್ದು ಎಲ್ಲೆಡೆ ಹೈಲೈಟ್‌ ಆಗಿದೆ.  ಕಾಂಗ್ರೆಸ್ (Congress) ನಾಯಕರೆಲ್ಲರೂ ಸಮಾವೇಶದಲ್ಲಿ ಭಾಗಿಯಾಗಿದ್ದರು. ಯೋಗೇಂದ್ರ ಯಾದವ್,ದೇವನೂರು ಮಹಾದೇವ ಸಮಾರಂಭದಲ್ಲಿದ್ದರು. ಅಂದಾಜು 20 ಸಾವಿರ ಮಂದಿ ಸಮಾವೇಶದಲ್ಲಿ ಭಾಗಿಯಾಗಿದ್ದರು.

Video Top Stories