Asianet Suvarna News Asianet Suvarna News

ಗಂಡು ಮಗುವಿಗೆ ಜನ್ಮ ನೀಡಿದ ಸೋಂಕಿತ ಮಹಿಳೆ; ಮಗುವಿಗೆ ಅಂಟಿಲ್ಲ ಡೆಡ್ಲಿ ವೈರಸ್

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಂಕಿತ ಮಹಿಳೆಗೆ ಹೆರಿಗೆಯಾಗಿದೆ. ಗಂಡು ಮಗುವಿಗೆ ಜನ್ಮ ನೀಡಿದ್ದು ಅದೃಷ್ಟಾವಶಾತ್ ಡೆಡ್ಲಿ ವೈರಸ್ ಮಗುವಿಗೆ ಅಂಟಿಲ್ಲ. ವೈದ್ಯರು, ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 

ಬೆಂಗಳೂರು (ಜೂ. 03): ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೋಂಕಿತ ಮಹಿಳೆಗೆ ಹೆರಿಗೆಯಾಗಿದೆ. ಗಂಡು ಮಗುವಿಗೆ ಜನ್ಮ ನೀಡಿದ್ದು ಅದೃಷ್ಟಾವಶಾತ್ ಡೆಡ್ಲಿ ವೈರಸ್ ಮಗುವಿಗೆ ಅಂಟಿಲ್ಲ. ವೈದ್ಯರು, ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 

ಕೋವಿಡ್ 19 ನಿಭಾಯಿಸುವಲ್ಲಿ ಬೆಂಗಳೂರು ನಂ 1 ಆಗಿದ್ಹೇಗೆ?

ಸೋಂಕಿತ ಮಹಿಳೆ ಯಲಹಂಕದ ಸುಗ್ಗಪ್ಪ ಲೇಔಟ್ ನಿವಾಸಿ. ಈ ಮಹಿಳೆಗೆ ಕೋವಿಡ್ 19 ಪಾಸಿಟೀವ್ ಇದ್ದು ಮಗುವನ್ನು ಇದರಿಂದ ಬಚಾವ್ ಮಾಡುವ ಹಾಗೂ ಅವರನ್ನು ರಕ್ಷಿಸಿಕೊಳ್ಳುವ ಸವಾಲು ವೈದ್ಯರ ಮುಂದಿತ್ತು. ಇದನ್ನು ಸಮರ್ಥವಾಗಿ ವೈದ್ಯರು ನಿಭಾಯಿಸಿದ್ದಾರೆ. ಅವರ ಸೇವೆಗೊಂದು ಸಲಾಂ ಎನ್ನಲೇಬೇಕು..!