Asianet Suvarna News Asianet Suvarna News

Narayana Guru Tableau Row: ಕೇರಳ ಸರ್ಕಾರದಿಂದ ಸುಮ್ಮನೆ ವಿವಾದ, ಕೇಂದ್ರದಿಂದ ವಿರೋಧವಿಲ್ಲ: ಕೋಟ

ಕೇಂದ್ರ ಸರ್ಕಾರದಿಂದ ನಾರಾಯಣ ಗುರು ಟ್ಯಾಬ್ಲೋ (Narayana Guru Tableau) ತಿರಸ್ಕಾರ ಹಿನ್ನೆಲೆ, ಕೇಂದ್ರದ ನಡೆ ಖಂಡಿಸಿ ಜನಾರ್ದನ ಪೂಜಾರಿ (Janardhana Poojary) ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ.  

ಮಂಗಳೂರು (ಜ. 24): ಕೇಂದ್ರ ಸರ್ಕಾರದಿಂದ ನಾರಾಯಣ ಗುರು ಟ್ಯಾಬ್ಲೋ (Narayana Guru Tableau) ತಿರಸ್ಕಾರ ಹಿನ್ನೆಲೆ, ಕೇಂದ್ರದ ನಡೆ ಖಂಡಿಸಿ ಜನಾರ್ದನ ಪೂಜಾರಿ (Janardhana Poojary) ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ. ಜನಾರ್ದನ ಪೂಜಾರಿ ನಿವಾಸಕ್ಕೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. 

Republic Day Parade Tableau: ಕೇರಳ ರಾಜ್ಯದ ಸ್ತಬ್ದಚಿತ್ರ ತಿರಸ್ಕೃತ, ಅದಕ್ಕೆ ಇಲ್ಲಿವೆ ಕಾರಣ

ನಾರಾಯಣ ಗುರು ಟ್ಯಾಬ್ಲೋ ವಿವಾದದ ಬಗ್ಗೆ ಜನಾರ್ದನ ಪೂಜಾರಿಗೆ, ಕೋಟಾ ಮನವರಿಕೆ ಮಾಡಿಕೊಟ್ಟಿದ್ದಾರೆ.  'ಕೇಂದ್ರ ‌ಸರ್ಕಾರ ಮತ್ತು ನರೇಂದ್ರ ಮೋದಿಗೆ ನಾರಾಯಣ ಗುರುಗಳ ಬಗ್ಗೆ ಗೌರವವಿದೆ. ಅವರು ಟ್ಯಾಬ್ಲೋ ತಿರಸ್ಕಾರ ಮಾಡಿಲ್ಲ,ಕೇರಳ ಸರ್ಕಾರ ಸುಮ್ಮನೆ ವಿವಾದ ಎಬ್ಬಿಸಿದೆ. ಜ.26 ರ ಪ್ರತಿಭಟನೆ ಬಗ್ಗೆ ಯೋಚಿಸಿ ನಿರ್ಧಾರ ಮಾಡಿ ಎಂದು ಕೋಟಾ ಮನವಿ ಮಾಡಿದೆ. 

ಪ್ರತಿಭಟನೆ ಕೈ ಬಿಡದೇ ರಾಜಕೀಯ ನುಸುಳದಂತೆ ಮೆರವಣಿಗೆ ನಡೆಸೋದಾಗಿ ಪೂಜಾರಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ.  ಸದ್ಯ ಜನಾರ್ದನ ಪೂಜಾರಿ ಹೋರಾಟಕ್ಕೆ ವಿಎಚ್ ಪಿ- ಬಜರಂಗದಳ ‌ಬೆಂಬಲ ನೀಡಿದೆ. ನಾರಾಯಣ ಗುರುಗಳ ಯಾವುದೇ ಕಾರ್ಯಕ್ರಮಕ್ಕೆ ಬಿಜೆಪಿ ಬೆಂಬಲವಿದೆ. ಆದರೆ ಕಮ್ಯುನಿಸ್ಟರ ಈ ಕುತಂತ್ರ ರಾಜಕೀಯದ ಬಗ್ಗೆ ನಮ್ಮ ವಿರೋಧವಿದೆ ಅಂತ ಪೂಜಾರಿಯವರಿಗೆ, ಕೋಟಾ ಶ್ರೀನಿವಾಸ ಪೂಜಾರಿ ತಮ್ಮ ನಿಲುವು ತಿಳಿಸಿದ್ದಾರೆ