Asianet Suvarna News Asianet Suvarna News

Narayana Guru Tableau Row: ನಾಳೆ ದಕ್ಷಿಣ ಕನ್ನಡದಲ್ಲಿ ಪ್ರತಿಭಟನೆ, ಬಿಜೆಪಿಗೆ ತಲೆ ನೋವಾದ ವಿವಾದ

ಕರಾವಳಿ ಬಿಜೆಪಿಗೆ ಕೇರಳದ ಟ್ಯಾಬ್ಲೋ ವಿಚಾರ ತಲೆನೋವಾಗಿ ಪರಿಣಮಿಸಿದೆ. ಕೇಂದ್ರ ಸರ್ಕಾರ ನಾರಾಯಣ ಗುರು ಟ್ಯಾಬ್ಲೋ ( Narayan Guru Tableau) ನಿರಾಕರಿಸಿದೆ. ಕೇಂದ್ರದ ನಡೆ ವಿರುದ್ಧ ಜನಾರ್ದನ ಪೂಜಾರಿ ಸಿಡಿದಿದ್ದಾರೆ. ನಾಳೆ ಬೃಹತ್ ಪ್ರತಿಭಟನೆಗೆ ಮುಂದಾಗಿದ್ಧಾರೆ. 

ಬೆಂಗಳೂರು (ಜ. 25): ಕರಾವಳಿ ಬಿಜೆಪಿಗೆ ಕೇರಳದ ಟ್ಯಾಬ್ಲೋ ವಿಚಾರ ತಲೆನೋವಾಗಿ ಪರಿಣಮಿಸಿದೆ. ಕೇಂದ್ರ ಸರ್ಕಾರ ನಾರಾಯಣ ಗುರು (Narayan Guru Tableau) ಟ್ಯಾಬ್ಲೋ ನಿರಾಕರಿಸಿದೆ. ಕೇಂದ್ರದ ನಡೆ ವಿರುದ್ಧ ಜನಾರ್ದನ ಪೂಜಾರಿ ಸಿಡಿದಿದ್ದಾರೆ. ನಾಳೆ ಬೃಹತ್ ಪ್ರತಿಭಟನೆಗೆ ಮುಂದಾಗಿದ್ಧಾರೆ. 

Narayana Guru Tableau Row: ಕೇರಳ ಸರ್ಕಾರದಿಂದ ಸುಮ್ಮನೆ ವಿವಾದ, ಕೇಂದ್ರದಿಂದ ವಿರೋಧವಿಲ್ಲ: ಕೋಟ

ಗಣರಾಜ್ಯೋತ್ಸವ ಪೆರೇಡ್‌ನಲ್ಲಿ (Republic Day Parade) ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇಂದ್ರ ಸರ್ಕಾರ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಜನವರಿ 26ರಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada) ವಿವಿಧ ಸಂಘ ಸಂಸ್ಥೆಗಳ ಕೂಡುವಿಕೆಯಿಂದ ಪ್ರತಿ ತಾಲೂಕುಗಳಲ್ಲಿ ಆಯೋಜಿಸಲಾದ ಟ್ಯಾಬ್ಲ್ಯೋ ಮೆರವಣಿಗೆಗೆ ಜಾತಿ, ಮತ, ಪಕ್ಷ ಭೇದ ಮರೆತು ಎಲ್ಲರೂ ಬೆಂಬಲಿಸುವಂತೆ ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಕರೆ ನೀಡಿದ್ದಾರೆ. ವಿಶ್ವ ಹಿಂದೂ ಪರಿಷತ್, ಭಜರಂಗದಳ ಈ ಪ್ರತಿಭಟನೆಗೆ ಬೆಂಬಲ ನೀಡಿವೆ. 

ಪ್ರತಿಭಟನೆ ಕೈ ಬಿಡುವಂತೆ ಜನಾರ್ದನ ಪೂಜಾರಿಯವರನ್ನು ಕೋಟ ಶ್ರೀನಿವಾಸ ಪೂಜಾರಿ ಮನವೊಲಿಸಿದ್ದರು. ಆದರೆ ಅವರು ಪ್ರತಿಭಟನೆ ಕೈ ಬಿಡಲು ಒಪ್ಪಿಲ್ಲ