Asianet Suvarna News Asianet Suvarna News

ಸಿದ್ದರಾಮಯ್ಯಗೆ ಕೋವಿಡ್ 19: ಮೈಸೂರು ಪತ್ರಕರ್ತರ ಸಂಘ ಸೀಲ್‌ಡೌನ್

Aug 4, 2020, 2:58 PM IST

ಬೆಂಗಳೂರು (ಆ. 04): ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕೋವಿಡ್ ಬಂದಿರುವ ಹಿನ್ನಲೆಯಲ್ಲಿ ಮೈಸೂರಿನ ಪತ್ರಕರ್ತರ ಸಂಘವನ್ನು ಸೀಲ್ ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗಿದೆ. ಸಿದ್ದರಾಮಯ್ಯ ಕಳೆದ ನಾಲ್ಕು ದಿನಗಳಲ್ಲಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದರು. ಅದರಲ್ಲಿ ಒಂದು ದಿನ ಮೈಸೂರು ಪ್ರೆಸ್ ಕ್ಲಬ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಸಂವಾದ ನಡೆಸಿದ್ದರು.

ಈ ಸಂವಾದದಲ್ಲಿ 100 ಕ್ಕೂ ಹೆಚ್ಚು ಪತ್ರಕರ್ತರು ಭಾಗಿಯಾಗಿದ್ದರು. ಜೊತೆಗೆ ಬೆಂಬಲಿಗರೂ ಕೂಡಾ ಸಾಕಷ್ಟು ಜನರಿದ್ದರು. ಭಾಗಿಯಾಗಿದ್ದವರಿಗೆಲ್ಲರಿಗೂ ಕ್ವಾರಂಟೈನ್ ಆಗಲು ಸೂಚಿಸಿದ್ದಾರೆ. ಇನ್ನು 3 ದಿನಗಳ ಕಾಲ ಪ್ರೆಸ್‌ ಕ್ಲಬ್ ಮುಚ್ಚಲಾಗುತ್ತದೆ. 

ಸಿದ್ದರಾಮಯ್ಯ ಜೊತೆ ಇದ್ದ ಡಿಕೆಶಿ ಟೆಂಪಲ್ ರನ್; ಸಾಮಾಜಿಕ ಅಂತರವೂ ಇಲ್ಲ, ಜವಾಬ್ದಾರಿಯೂ ಇಲ್ಲ..!