Asianet Suvarna News Asianet Suvarna News

ವಾಯುಸೇನೆಗೆ ಸೇವೆ ಸಲ್ಲಿಸಲು ಹೊರಟಿದೆ ಮುಧೋಳ ಶ್ವಾನ

Feb 27, 2021, 2:45 PM IST

ಬೆಂಗಳೂರು (ಫೆ. 27): ಈಗಾಗಲೇ ಮುಧೋಳ ಶ್ವಾನಗಳು ಭಾರತೀಯ ಸೇನೆ, ಇಂಡೋ ಟಿಬೇಟಿಯನ್‌ ಬಾರ್ಡರ್‌ ಫೋರ್ಸ್‌, ಬಿಎಸ್‌ಎಫ್‌, ಸಶಸ್ತ್ರ ಸೀಮಾಬಲ ಸೇರಿವೆ. ಈಗ ಹೊಸದಾಗಿ ಏರ್‌ಫೋರ್ಸ್‌ಗೂ ಮುಧೋಳ ಶ್ವಾನ ಸೇವೆ ಸಲ್ಲಿಸಲು ಹೊರಟಿದೆ. 

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ಸಮೀಪದ ತಿಮ್ಮಾಪುರದ ಶ್ವಾನ ಸಂಶೋಧನಾ ಹಾಗೂ ಮಾಹಿತಿ ಕೇಂದ್ರದಲ್ಲಿ ಡಿಸಿಎಂ ಗೋವಿಂದ ಕಾರಜೋಳ  ಅಧಿಕೃತವಾಗಿ ಮುಧೋಳ ತಳಿಯ ನಾಲ್ಕು ಶ್ವಾನದ ಮರಿಗಳನ್ನು ವಾಯುಸೇನೆ ಅಧಿಕಾರಿಗಳಿಗೆ ಹಸ್ತಾಂತರಿಸಿದರು.
 

Video Top Stories