News Hour: ಮುಡಾದಲ್ಲಿ ಆಗಿರೋದು ಭ್ರಷ್ಟಾಚಾರವಲ್ಲ, ಹಗಲು ದರೋಡೆ; ಕೋಟಿ ಬೆಲೆಯ ಸೈಟ್ 3 ಸಾವಿರಕ್ಕೆ ಮಾರಾಟ!
ಮುಡಾದಲ್ಲಿ ನಡೆದಿರುವುದು ಸಾಮಾನ್ಯ ಭ್ರಷ್ಟಾಚಾರವಲ್ಲ, ಬ್ರಹ್ಮಾಂಡ ಭ್ರಷ್ಟಾಚಾರ. ಸಿಎಂ ಸಿದ್ದರಾಮಯ್ಯ ಅವರ ಪತ್ನಿಯ ಕೇಸ್‌ನಿಂದಾಗಿ ಕೋಟಿ ಕೋಟಿ ಬೆಲೆ ಬಾಳುವ ಸೈಟ್‌ಗಳನ್ನು ಕೇವಲ ಮೂರು ಸಾವಿರ ರೂಪಾಯಿಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಬೆಂಗಳೂರು (ಡಿ.7): ಮುಡಾದಲ್ಲಿ ಆಗಿರುವುದು ಸಾಮಾನ್ಯ ಭ್ರಷ್ಟಾಚಾರವಲ್ಲ. ಇಲ್ಲಾಗಿರೋದು ಬ್ರಹ್ಮಾಂಡ ಭ್ರಷ್ಟಾಚಾರ. ಇದಕ್ಕೆ ಮೂಲ ಕಾರಣವಾಗಿದ್ದು ಸಿಎಂ ಸಿದ್ದರಾಮಯ್ಯ ಅವರ ಪತ್ನಿಯ ಕೇಸ್. ಆ ಬಳಿಕ ಮುಡಾ ತಾನು ಈಗಾಗಲೇ ಮಂಜೂರು ಮಾಡಿದ 48 ಸೈಟ್ ರದ್ದು ಮಾಡಿದೆ. ಆದರೆ, ಇವರ ಭ್ರಷ್ಟಾಚಾರ ಇಲ್ಲಿಗೆ ನಿಂತಿಲ್ಲ.
ಕೋಟಿ ಕೋಟಿ ಬೆಲೆ ಬಾಳುವ ಸೈಟ್ ಬರೀ ಮೂರು ಸಾವಿರ ರೂಪಾಯಿಗೆ ಮುಡಾ ಮಾರಾಟ ಮಾಡಿದೆ. ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ಮುಡಾ ಡೀಲ್ ಮಾಡಿಕೊಂಡಿರುವುದು ಗೊತ್ತಾಗಿದೆ.
ಬೆಮೆಲ್ ನಿರ್ಮಿತ ಕೋಚ್ ಕಳಪೆ, ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ಟ್ರೇನ್ ಇನ್ನಷ್ಟು ವಿಳಂಬ
ಇದರ ಬೆನ್ನಲ್ಲಿಯೇ ವಕೀಲ ರವಿಕುಮಾರ್ ಎನ್ನುವವರು ಸಂಪೂರ್ಣ ದಾಖಲೆಯೊಂದಿಗೆ ಕಳೆದ ಜುಲೈನಲ್ಲಿಯೇ ಪ್ರಧಾನಿ ಮೋದಿಗೆ ದೂರು ಸಲ್ಲಿಸಿದ್ದರು. ಇದರಲ್ಲಿ 296 ಪುಟಗಳ ದಾಖಲೆಯನ್ನೂ ನೀಡಿದ್ದಾರೆ.