Asianet Suvarna News Asianet Suvarna News

ಆನಂದ್ ಸಿಂಗ್ ರೆಬೆಲ್, ಉಳಿದವರು ಸೈಲೆಂಟ್; ಬೆಂಬಲ ಸಿಗದೇ ಏಕಾಂಗಿಯಾದ್ರಾ ಸಚಿವರು.?

Aug 11, 2021, 4:49 PM IST

ಬೆಂಗಳೂರು (ಆ. 11): ಸಂಪುಟ ರಚನೆ ಬಳಿಕ ಮೂವರು ಸಚಿವರು ಅಸಮಾಧಾನಗೊಂಡಿದ್ದರು. ಎಂಟಿಬಿ ನಾಗರಾಜ್ ಹಾಗೂ ಶ್ರೀರಾಮುಲು ಮನವೊಲಿಕೆಯಲ್ಲಿ ಸಿಎಂ ಸಕ್ಸಸ್ ಆಗಿದ್ದಾರೆ. ಆದರೆ ಆನಂದ್ ಸಿಂಗ್ ಮಾತ್ರ ರೆಬೆಲ್ ಆಗಿದ್ದಾರೆ.

ಆನಂದ್ ಸಿಂಗ್ ಜೊತೆ ಚರ್ಚಿಸಿದ್ದೇನೆ, ಬಿಕ್ಕಟ್ಟು ಶೀಘ್ರವೇ ಬಗೆಹರಿಯುತ್ತದೆ: ಆರ್ ಅಶೋಕ್

ಖಾತೆಯಿಂದ ಅಸಮಾಧಾನಗೊಂಡಿರುವ ಆನಂದ್ ಸಿಂಗ್ ರಾಜೀನಾಮೆ ಪ್ರಹಸನ ನಡೆಯುತ್ತಿದೆ. ಅವರ ಅಸಮಾಧಾನವನ್ನು ಶಮನ ಮಾಡುವ ಕೆಲಸಕ್ಕೆ ಸಿಎಂ ಮುಂದಾಗಿದ್ದಾರೆ. ಇಂದು ಹಿರಿಯ ಸಚಿವರ ಜೊತೆ ಆನಂದ್ ಸಿಂಗ್ ಮನವೊಲಿಸಲು ಸಿಎಂ ಮುಂದಾಗಿದ್ದು, ಖಾತೆ ಬದಲಾವಣೆ ಆಗುತ್ತಾ..? ಇದೇ ಖಾತೆಯೇ ಮುಂದುವರೆಯುತ್ತಾ.? ನೋಡಬೇಕಿದೆ.