ಡಿಸಿಯವರಿಗೆ ಮೀಟಿಂಗ್ ತಗೊಳೋಣ ಅಂದ್ರೆ ಪ್ರೊಟೊಕಾಲ್ ಇಲ್ಲ ಅಂತಾರೆ: ಪ್ರಜ್ವಲ್ ರೇವಣ್ಣ
ಚಾಮರಾಜನಗರದಲ್ಲಿ ಆಕ್ಸಿಜನ್ ಎಮರ್ಜೆನ್ಸಿಯಿಂದಾಗಿ 24 ಗಂಟೆಗಳಲ್ಲಿ 24 ಮಂದಿ ಸಾವನ್ನಪ್ಪಿರುವ ದುರಂತ ನಡೆದಿದೆ. ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಮೃತರ ಸಂಬಂಧಿಕರ, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರು (ಮೇ. 03): ಚಾಮರಾಜನಗರದಲ್ಲಿ ಆಕ್ಸಿಜನ್ ಎಮರ್ಜೆನ್ಸಿಯಿಂದಾಗಿ 24 ಗಂಟೆಗಳಲ್ಲಿ 24 ಮಂದಿ ಸಾವನ್ನಪ್ಪಿರುವ ದುರಂತ ನಡೆದಿದೆ. ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಮೃತರ ಸಂಬಂಧಿಕರ, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಟ್ರ್ಯಾಜಿಡಿ ಬಗ್ಗೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪ್ರತಿಕ್ರಿಯಿಸಿದ್ಧಾರೆ. 'ಮೊದಲ ಅಲೆ ಬಂದಾಗ ನಾವು ತಯಾರಾಗಿರಲಿಲ್ಲ. ಈಗ 6900 ಕೋಟಿ ರ್ಚು ಮಾಡಿ ಆಸ್ಪತ್ರೆ ಮಾಡಿದೀವಿ ಅಂತ ಸರ್ಕಾರ ಹೇಳುತ್ತದೆ. ಎಲ್ಲಿದೆ ಬೆಡ್‌ಗಳು..? ಎಲ್ಲಿದೆ ಆಕ್ಸಿಜನ್..? ನಾನು ಡಿಸಿಯವರಿಗೆ ಕರೆ ಮಾಡಿ ಮೀಟಿಂಗ್ ತಗೋಳೋಣ, ತಾಲೂಕಿನ ಸಮಸ್ಯೆಗಳನ್ನು ಸಿಎಂ ಗಮನಕ್ಕೆ ತರೋಣ ಅಂದ್ರೆ ಪ್ರೋಟೋಕಾಲ್ ಇಲ್ಲ ಸರ್, ನೀವು ಕರೆಯುವ ಹಾಗಿಲ್ಲ ಅಂತಾರೆ. ಏನ್ಮಾಡೋಣ ಹೇಳಿ..? ಅಂತ ಅಸಮಾಧಾನ ವ್ಯಕ್ತಪಡಿಸಿದ್ದಾರೆ.