Asianet Suvarna News Asianet Suvarna News

ಬೇಕಾಬಿಟ್ಟಿ ಹೊರಗೆ ಓಡಾಡುವವರು ನೀವೊಮ್ಮೆ ಈ ಸ್ಟೋರಿ ನೋಡಿ..!

ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಕೊರೋನಾ ಹೊಂಚುಹಾಕಿ ಕುಳಿತುಕೊಂಡಿದೆ. ನಗರದ 198 ವಾರ್ಡ್‌ಗಳಲ್ಲೂ ಕೊರೋನಾ ತಾಂಡವವಾಡುತ್ತಿದೆ. ಈ ಪೈಕಿ 160 ವಾರ್ಡ್‌ಗಳಲ್ಲಿ ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಬೆಂಗಳೂರು(ಜು.23): ಸಿಲಿಕಾನ್ ಸಿಟಿ ಜನರೇ ಹೇಗೂ ಲಾಕ್‌ಡೌನ್ ರಿಲೀಸ್ ಮಾಡಿದೆ ಸರ್ಕಾರ, ಇನ್ನು ಎಲ್ಲಿಗೆ ಬೇಕಿದ್ದರೂ ಅಡ್ಡಾಡಬಹುದು ಎಂದುಕೊಳ್ಳುವವರು ಈ ಸುದ್ದಿಯನ್ನು ನೀವು ನೋಡಲೇಬೇಕು.

ಹೌದು, ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಕೊರೋನಾ ಹೊಂಚುಹಾಕಿ ಕುಳಿತುಕೊಂಡಿದೆ. ನಗರದ 198 ವಾರ್ಡ್‌ಗಳಲ್ಲೂ ಕೊರೋನಾ ತಾಂಡವವಾಡುತ್ತಿದೆ. ಈ ಪೈಕಿ 160 ವಾರ್ಡ್‌ಗಳಲ್ಲಿ ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ರಾಜ್ಯದಲ್ಲಿ ಸೋಂಕು ಹೆಚ್ಚಾಗಲು ಕಾಂಟ್ಯಾಕ್ಟ್ ಟ್ರೇಸಿಂಗ್‌ನಲ್ಲಿ ಇಳಿಮುಖ ಕಾರಣ..?

ಈ 160 ವಾರ್ಡ್‌ಗಳಲ್ಲಿ ತಲಾ 50ಕ್ಕೂ ಹೆಚ್ಚು ಸಕ್ರಿಯ ಕೊರೋನಾ ಕೇಸ್‌ಗಳಿವೆ. ಇನ್ನು 28 ವಾರ್ಡ್‌ಗಳಲ್ಲಿ ನೂರಕ್ಕೂ ಹೆಚ್ಚು ಸಕ್ರಿಯ ಕೇಸ್‌ಗಳಿದ್ದರೆ, 30ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ 80ಕ್ಕೂ ಹೆಚ್ಚು ಸಕ್ರಿಯ ಕೇಸ್‌ಗಳಿವೆ. ಇಷ್ಟೆಲ್ಲಾ ಗೊತ್ತಾದ ಮೇಲೂ ಬೇಕಾಬಿಟ್ಟಿ ಅಡ್ಡಾಡುತ್ತೇನೆ ಅಂದರೆ ಯಾರೂ ಏನು ಮಾಡೋಕೆ ಆಗಲ್ಲ. ಹಣೆಬರಹಕ್ಕೆ ಹೊಣೆ ಯಾರು ಅಲ್ವೇ? ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories