ಶಹಾಬಾದ್‌ ಕೋವಿಡ್‌ ದುಡ್ಡನ್ನ ಲೂಟಿ ಹೊಡೆಯಕ್ಕೆ ಮಾಡಿರೋ ಪ್ಲ್ಯಾನ್ ಇದು: ಪ್ರಿಯಾಂಕ ಖರ್ಗೆ

ಶಹಾಬಾದ್‌ ಇಎಸ್‌ಐ ಆಸ್ಪತ್ರೆ (ESI Hospital) ಯನ್ನ ಹೊರಗಡೆಯಿಂದ ಶೃಂಗಾರ ಮಾಡಿರೋದು, ಒಳಗಡೆ ಏನೂ ಮಾಡಿಲ್ಲ. ಆಸ್ಪತ್ರೆ ನಡೆಸಲು ವೈದ್ಯ ಸಿಬ್ಬಂದಿಗಳು ಎಲ್ಲಿದ್ದಾರೆ.?  ಕೋವಿಡ್‌ ದುಡ್ಡನ್ನ ಲೂಟಿ ಹೊಡೆಯಕ್ಕೆ ಈ ಪ್ಲಾನ್ ಮಾಡಿರೋದು ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. 

First Published Jun 22, 2022, 4:16 PM IST | Last Updated Jun 22, 2022, 4:15 PM IST

ಬೆಂಗಳೂರು (ಜೂ. 22): ಯಾವ ಮಲ್ಟಿ ಸ್ಪೆಷಾಲಿಟಿ ಅಸ್ಪತ್ರೆಗೂ ಕಮ್ಮಿ ಇಲ್ಲ ಕಲಬುರಗಿಯ (kalaburagi) ಶಹಾಬಾದ್‌ ಇಎಸ್‌ಐ ಆಸ್ಪತ್ರೆ (ESI Hospital) ಇಲ್ಲಿ 100 ಕ್ಕೂ ಹೆಚ್ಚು ಕೋಣೆಗಳಿವೆ, ಎಲ್ಲಾ ಸೌಲಭ್ಯಗಳನ್ನೂ ಒಳಗೊಂಡಿದೆ. 10 ಕೋಟಿ ರೂ ವೆಚ್ಚದಲ್ಲಿ ಈ ಆಸ್ಪತ್ರೆಯನ್ನು ಕಟ್ಟಲಾಗಿದೆ. ಕಟ್ಟಡ ಕಾಮಗಾರಿ ಮುಗಿದು 6 ತಿಂಗಳು ಕಳೆದರೂ ಇನ್ನೂ ಉದ್ಘಾಟನಾ ಭಾಗ್ಯ ಸಿಕ್ಕಿಲ್ಲ. ಸ್ಥಳೀಯ ಶಾಸಕ ಬಸವರಾಜ್ ಮತ್ತಿಮೂಡ, ಆಸ್ಪತ್ರೆ ಸ್ಥಳಾಂತರಕ್ಕೆ ಅವಕಾಶ ನೀಡದ ಕಾರಣ ಕಟ್ಟಡ ಇನ್ನೂ ಉದ್ಘಾಟನೆಯಾಗಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. 

ಶಾಸಕರ ಪ್ರತಿಷ್ಠೆ ವಾರ್, ಕಟ್ಟಡ ರೆಡಿಯಾಗಿ 6 ತಿಂಗಳಾದ್ರೂ ಉದ್ಘಾಟನೆಯಾಗಿಲ್ಲ ಶಹಾಬಾದ್ ESI ಆಸ್ಪತ್ರೆ

ಆಸ್ಪತ್ರೆಯನ್ನ ಹೊರಗಡೆಯಿಂದ ಶೃಂಗಾರ ಮಾಡಿರೋದು, ಒಳಗಡೆ ಏನೂ ಮಾಡಿಲ್ಲ. ಆಸ್ಪತ್ರೆ ನಡೆಸಲು ವೈದ್ಯ ಸಿಬ್ಬಂದಿಗಳು ಎಲ್ಲಿದ್ದಾರೆ.?  ಕೋವಿಡ್‌ ದುಡ್ಡನ್ನ ಲೂಟಿ ಹೊಡೆಯಕ್ಕೆ ಈ ಪ್ಲಾನ್ ಮಾಡಿರೋದು ಎಂದು ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ.