Asianet Suvarna News Asianet Suvarna News

ನವರಾತ್ರಿಯಂದು ದೇವಿಯ ಗರ್ಭಗುಡಿಯಲ್ಲಿ ಮೂಡಿತಾ ಹೆಜ್ಜೆ ಗುರುತು..?

Oct 14, 2021, 1:45 PM IST

ಬೆಂಗಳೂರು (ಅ. 14): ನಾಡಿನಾದ್ಯಂತ ನವರಾತ್ರಿ ಸಂಭ್ರಮ. ತಾಯಿ ಜಗನ್ಮಾತೆಯನ್ನು ಸಡಗರ, ಸಂಭ್ರಮದಿಂದ ಆರಾಧಿಸುತ್ತೇವೆ.  ಮಾಗಡಿ ರಸ್ತೆಯ ಮಾರಿಯಮ್ಮನ ದೇವಾಲಯದಲ್ಲಿ ದೇವಿ ಪವಾಡವೊಂದು ನಡೆದಿದೆ ಎನ್ನಲಾಗುತ್ತಿದೆ. 

ದೇವಾಲಯದ ಗರ್ಭಗುಡಿಯಲ್ಲಿ ದೇವಿಯ ಹೆಜ್ಜೆ ಗುರುತು ಮೂಡಿದೆ.  ಎರಡು ದಿನದ ಹಿಂದೆ ದೇವಿಗೆ  ಪೂಜೆ ನಡೆದಿತ್ತು.  ಬಳಿಕ ದೇವಸ್ಥಾನ ಕ್ಲೋಸ್ ಮಾಡಲಾಗಿತ್ತು.  ಇಂದು ದೇವಾಲಯ ತೆರೆದಾಗ ಗರ್ಭಗುಡಿ ತುಂಬೆಲ್ಲಾ ಅರಿಶಿಣ - ಕುಂಕುಮ ಚೆಲ್ಲಿದೆ. ಇದನ್ನ ಪವಾಡ ಎನ್ನಲಾಗುತ್ತಿದೆ.