Asianet Suvarna News Asianet Suvarna News

ವಿಶ್ವದಾಖಲೆ ಬರೆದ ಚಿಕ್ಕಬಳ್ಳಾಪುರ ಆರೋಗ್ಯ ಮೇಳ, 5000 ಆರೋಗ್ಯ ಸಿಬ್ಬಂದಿ ಭಾಗಿ

ಚಿಕ್ಕಬಳ್ಳಾಪುರ (Chikkaballapura) ನಗರದಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಡಾ.ಕೆ.ಸುಧಾಕರ್‌ (Dr Sudhakar) ಫೌಂಡೇಷನ್‌ ಆಯೋಜಿಸಿದ್ದ ಎರಡು ದಿನಗಳ ಮೆಗಾ ಆರೋಗ್ಯ ಮೇಳ ಹೊಸ ವಿಶ್ವದಾಖಲೆ ಬರೆದಿದೆ. 

ಚಿಕ್ಕಬಳ್ಳಾಪುರ (Chikkaballapura) ನಗರದಲ್ಲಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಡಾ.ಕೆ.ಸುಧಾಕರ್‌ (Dr Sudhakar) ಫೌಂಡೇಷನ್‌ ಆಯೋಜಿಸಿದ್ದ ಎರಡು ದಿನಗಳ ಮೆಗಾ ಆರೋಗ್ಯ ಮೇಳ ಹೊಸ ವಿಶ್ವದಾಖಲೆ ಬರೆದಿದೆ.  2 ಲಕ್ಷಕ್ಕೂ ಅಧಿಕ ಮಂದಿ ಆರೋಗ್ಯ ತಪಾಸಣೆಗೊಳಗಾಗುವ ಮೂಲಕ ಲಂಡನ್‌ ವರ್ಲ್ಡ್ ಬುಕ್‌ ಆಫ್‌ ರೆಕಾರ್ಡ್‌ಗೆ ಈ ಮೇಳ ಸೇರ್ಪಡೆಯಾಗಿದೆ.

ಆರೋಗ್ಯ ಮೇಳದಲ್ಲಿ ನೇತ್ರ, ಹೃದಯ, ಬಾಯಿ, ಗಂಟಲು ಕ್ಯಾನ್ಸರ್‌ ತಪಾಸಣೆ, ಕಣ್ಣು, ಕಿವಿ, ಮೂಗು ಹಾಗೂ ಗಂಟಲು ತಪಾಸಣೆ ಮಾಡಲಾಯಿತು. ಅಗತ್ಯವಿರುವವರಿಗೆ ಅಲ್ಲೇ ಚಿಕಿತ್ಸೆ ಹಾಗೂ ಉಚಿತವಾಗಿ ಔಷಧವನ್ನೂ ನೀಡಲಾಯಿತು. 14 ಖಾಸಗಿ ವೈದ್ಯಕೀಯ ಕಾಲೇಜು, 20 ಖಾಸಗಿ ಆಸ್ಪತ್ರೆ, 12 ಕಣ್ಣಿನ ಆಸ್ಪತ್ರೆಗಳೂ ಸೇರಿದಂತೆ ಹಲವು ಸಂಸ್ಥೆಗಳ 5000ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ ಭಾಗವಹಿಸಿದ್ದರು.
 

Video Top Stories