Asianet Suvarna News Asianet Suvarna News

ಡಿಕೆಶಿ ವಿರುದ್ಧ ಕಾಂಗ್ರೆಸ್‌ನಲ್ಲಿ ಷಡ್ಯಂತ್ರ ನಡೆಯುತ್ತಿದೆ: ಎಸ್ ಟಿ ಸೋಮಶೇಖರ್

Oct 14, 2021, 6:04 PM IST

ಬೆಂಗಳೂರು (ಅ. 14): ‘ಶಿವಕುಮಾರ್‌ ಭ್ರಷ್ಟಾಚಾರಿ’ ಎಂಬರ್ಥ ಬರುವಂತೆ ‘ಆತ ಕಲೆಕ್ಷನ್‌ ಗಿರಾಕಿ. ಅವರ ಹುಡುಗನೇ 50ರಿಂದ 100 ಕೋಟಿ ಮಾಡಿದ್ದಾನೆ ಅಂದರೆ ಡಿಕೆಶಿ ಹತ್ತಿರ ಇನ್ನೆಷ್ಟಿರಬೇಕು..? ದೊಡ್ಡ ಸ್ಕಾ್ಯಮ್‌ ಇದೆ. ಕೆದಕುತ್ತಾ ಹೋದರೆ ಇವರದ್ದೂ ಬರುತ್ತದೆ’ ಎಂದು ಸಲೀಂ ಮಾತನಾಡಿದ್ದಾರೆ ಎನ್ನಲಾಗಿರುವ ವಿಡಿಯೋವೊಂದು ವೈರಲ್ ಆಗಿದ್ದು, ಸಲೀಂ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆಯನ್ನೂ ಮಾಡಲಾಗಿದೆ. 

ಡಿಕೆ ಸಾಹೇಬ್ರು ಏನು ಶಿಕ್ಷೆ ಕೊಟ್ಟರೂ ಅನುಭವಿಸಲು ಸಿದ್ಧನಿದ್ದೇನೆ: ಕ್ಷಮೆಯಾಚಿಸಿದ ಸಲೀಂ

ಈ ಬಗ್ಗೆ ಸಚಿವ ಎಸ್‌ ಟಿ ಸೋಮಶೇಖರ್ ಪ್ರತಿಕ್ರಿಯಿಸಿದ್ದಾರೆ. 'ಮೊದಲಿನಿಂದಲೂ ಡಿಕೆಶಿ VS ಸಿದ್ದರಾಮಯ್ಯ ಗಲಾಟೆ ಇದೆ. ನಾನು ಕಾಂಗ್ರೆಸ್‌ನಲ್ಲಿದ್ದಾಗ ಪರ್ಸಂಟೇಜ್ ವ್ಯವಹಾರ ಇರಲಿಲ್ಲ. ಇದು ಅವರ ಪಕ್ಷದ ಆಂತರಿಕ ವಿಚಾರ ಬಿಡಿ' ಎಂದು ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.